ಬೆಂವಿವಿ ನೌಕರರ ಗೃಹ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ
ಬೆಂಗಳೂರು, ಫೆ.28: ಬೆಂಗಳೂರು ವಿಶ್ವವಿದ್ಯಾಲಯದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮಹಾಲಿಂಗಯ್ಯ ಹಾಗೂ ಉಪಾಧ್ಯಕ್ಷರಾಗಿ ಸುನಂದಾ ನೇಮಕವಾಗಿದ್ದಾರೆ.
ಮಂಡಳಿಯ ನಿರ್ದೇಶಕರಾಗಿ ಮುದ್ದಯ್ಯ, ಜೆ ಕೃಷ್ಣಯ್ಯ, ಡಾ. ಅಪ್ಪಾಜಿ, ರಂಗಧಾಮ, ಎಚ್.ಕೃಷ್ಣಪ್ಪ, ಕೆ.ಎನ್.ರಾಮಯ್ಯ, ಡಾ.ಕೆ.ಆರ್. ಗೋವಿಂದರಾಜು, ಎಂ.ಎನ್.ಶಿವಣ್ಣ, ಎಂ.ಎಸ್.ನಂದೀಶ್, ಎಚ್.ಎಸ್.ಯೋಗೇಶ್, ನಾಗಲಕ್ಷ್ಮಿ ಇವರನ್ನು ಐದು ವರ್ಷಗಳ ಅವಧಿಗೆ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story