varthabharthi


ಗಲ್ಫ್ ಸುದ್ದಿ

ದುಬೈ : ಬದ್ರಿಯಾ ವೆಲ್ಫೇರ್ ಕಮಿಟಿ ಕೂರ್ನಡ್ಕ ವಾರ್ಷಿಕ ಸಭೆ, ಪದಾಧಿಕಾರಿಗಳ ಆಯ್ಕೆ

ವಾರ್ತಾ ಭಾರತಿ : 1 Mar, 2020

ದುಬೈ : ಬದ್ರಿಯಾ ವೆಲ್ಫೇರ್ ಕಮಿಟಿ ಕೂರ್ನಡ್ಕ ಇದರ ನಾಲ್ಕನೇ ವಾರ್ಷಿಕ ಮಹಾಸಭೆಯು ಓರಿಯೆಂಟಲ್ ಕಾರ್ನರ್ ಹೋಟೆಲ್ ದುಬೈ ನಲ್ಲಿ ಶನಿವಾರ ನಡೆಯಿತು.

ನೌಶಾದ್ ಫೈಝಿ ಕಣ್ಣೂರ್ ಅವರ ದುಆದೊಂದಿಗೆ ಆರಂಭವಾದ ಸಭೆಯನ್ನು ಸಯ್ಯದ್ ಆಸ್ಕರ್ ಅಲಿ ತಂಙಳ್ ಕೋಲ್ಪೆ ಉದ್ಘಾಟಿಸಿ, ನಂತರ ಮಾತನಾಡಿದರು. ಕಾರ್ಯದರ್ಶಿ ಆರಿಫ್ ಕೂರ್ನಡ್ಕ ವರದಿ ವಾಚಿಸಿ, ಪ್ರಧಾನ ಕಾರ್ಯದರ್ಶಿ ಆಸಿಫ್ ಮರೀಲ್ ಲೆಕ್ಕ ಪತ್ರ ಮಂಡನೆ ಮಾಡಿದರು.

ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. 

ಗೌರವ ಸಲಹೆಗಾರರಾಗಿ ಶರೀಫ್ ಕಾವು, ಅಶ್ರಫ್ ಶಾಹ್ ಮಾಂತೂರ್, ಇಬ್ಬಿಯಾಕ, ರಝಾಕ್ ಹಾಜಿ ಸೋಂಪಡಿ, ಅಬ್ದುಲ್ ಸಲಾಂ ಬಪ್ಪಳಿಗೆ, ಶರೀಫ್ ಕೊಡ್ನೀರ್, ಅಶ್ರಫ್ ಪರ್ಲಡ್ಕ, ಸುಲೈಮಾನ್ ಬೈತಡ್ಕ, ಆದಮ್ ಮುಕ್ರಂಪಾಡಿ ಅವರನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಬೈತಡ್ಕ, ಅಧ್ಯಕ್ಷರಾಗಿ ಅಶ್ರಫ್ ಕೆಮ್ಮಿಂಜೆ, ಕಾರ್ಯಾಧ್ಯಕ್ಷರಾಗಿ ಉಸ್ಮಾನ್ ಕೆಮ್ಮಿಂಜೆ, ಉಪಾಧ್ಯಕ್ಷರಾಗಿ ರಶೀದ್ ಮರೀಲ್, ಯೆಹ್ಯಾ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ಎಕೆ ಮರೀಲ್, ಕಾರ್ಯದರ್ಶಿಯಾಗಿ ಶಾಕಿರ್ ಕೂರ್ನಡ್ಕ, ಆರಿಫ್ ಬೈತಡ್ಕ, ಖಜಾಂಜಿಯಾಗಿ ಉಸ್ಮಾನ್ ಮರೀಲ್, ಸಂಘಟನಾ ಕಾರ್ಯದರ್ಶಿಯಾಗಿ ಸಂಶುದ್ದೀನ್ ಕೂರ್ನಡ್ಕ , ಆಶಿಕ್ ಬೈತಡ್ಕ, ಸಂಚಾಲಕರಾಗಿ ಬಶೀರ್ ಕೆಮ್ಮಿಂಜೆ, ಇಸಾಕ್ ಕೂರ್ನಡ್ಕ, ಇಸ್ಮಾಯಿಲ್ ದರ್ಬೆ, ಮುಸ್ತಾಕ್ ಕೂರ್ನಡ್ಕ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಶಕೂರ್, ಮುನೀರ್ ಕೂರ್ನಡ್ಕ , ಮುಸ್ತಾಖ್ ಕೂರ್ನಡ್ಕ, ಅಶ್ರಫ್ ಯುಕೆ, ರಫೀಕ್ ಮರೀಲ್ , ಅಬ್ದುಲ್ ಲತೀಫ್ ಕೂರ್ನಡ್ಕ , ಅಝರ್ ಕೆಎಂ, ಅಬ್ದುಲ್ ನಿಝಾರ್, ರಹ್ಮಾನ್ ಕೆಮ್ಮಿಂಜೆ, ರಿಯಾಝ್ ಕೂರ್ನಡ್ಕ, ಶಾಹಿದ್ ಕಮ್ಮಾಡಿ, ಅಶ್ವಾದ್ ನವಾಝ್, ಹಾರಿಸ್ ಸಂಜೆಯ್ನಗರ, ಝೈದ್ ಕೂರ್ನಡ್ಕ, ಆಶಿಕ್ ಜುನೈದ್, ಮನ್ಸೂರ್, ಮುದಸ್ಸರ್, ಅಝೀಝ್ ಬಿ, ರಾಮ್ಲಾನ್ ಮರೀಲ್ , ಇಬ್ರಾಹಿಂ, ಬಾವಾ ಕೆಮ್ಮಿಂಜೆ , ಮುನಾಝ್, ಲಿಯಾಖತ್, ಸಮೀರ್ , ಉಮ್ಮರ್ ಫಾರೂಕ್, ಮೊಹಮ್ಮದ್ ರಫೀಕ್ , ಕರೀಂ ಅವರನ್ನು ಆಯ್ಕೆ ಮಾಡಲಾಯಿತು.

ಸಲಹೆಗಾರರಾಗಿ ಉನೈಸ್ ಫೈಝಿ ಉಸ್ತಾದ್ ಹಾಗೂ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕಲ್ಲೇಗ ಇವರುಗಳನ್ನು ನೇಮಿಸಲಾಯಿತು.

ಕೂರ್ನಡ್ಕ ಜಮಾಅತ್ ಕಮಿಟಿಯ ಉಪಾಧ್ಯಕ್ಷರು ಹಾಗೂ ವಫಿಯಾ ಮಹಿಳಾ ಕಾಲೇಜು ಇದರ ಖಜಾಂಜಿ ಝುಬೈರ್ ಪಿಕೆ, ಬಿ ಡಬ್ಲ್ಯೂ ಸಿ  ಕಟ್ಟಡ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಬೈತಡ್ಕ ಹಾಗೂ ಪ್ರಧಾನ ಕಾರ್ಯದರ್ಶಿ ಆಸಿಫ್ ಮರೀಲ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)