ತೃತೀಯ ಲಿಂಗಿಗಳ ಗೃಹ ನಿರ್ಮಾಣಕ್ಕೆ 1.5 ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್
Photo: facebook.com/offllawrence
ಚೆನ್ನೈ: ರಾಘವ ಲಾರೆನ್ಸ್ ಅವರ 'ಲಕ್ಷ್ಮಿ ಬಾಂಬ್' ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟ ಅಕ್ಷಯ್ ಕುಮಾರ್, ಚೆನ್ನೈಯಲ್ಲಿ ತೃತೀಯ ಲಿಂಗಿಗಳ ಗೃಹ ನಿರ್ಮಾಣಕ್ಕಾಗಿ 1.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ವಿಚಾರವನ್ನು ಲಾರೆನ್ಸ್ ಅವರು ಫೇಸ್ ಬುಕ್ ನಲ್ಲಿ ಫೋಟೋ ಸಹಿತ ಶೇರ್ ಮಾಡಿದ್ದಾರೆ.
ತಮ್ಮ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಕುರಿತಂತೆಯೂ ಅವರು ಈ ಪೋಸ್ಟ್ ನಲ್ಲಿ ಬರೆದಿದ್ದು, ಬಡವರಿಗಾಗಿ, ಅಂಗವಿಕಲರಿಗಾಗಿ ಹಾಗೂ ಅನಾಥ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ನಡೆಸುವ ತಮ್ಮ ಟ್ರಸ್ಟ್ ಈ ವರ್ಷ 15ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ತೃತೀಯ ಲಿಂಗಿಗಳಿಗೆ ಗೃಹ ನಿರ್ಮಿಸುವ ಯೋಜನೆಯಿದೆ, ಅದಕ್ಕಾಗಿ ಅಕ್ಷಯ್ ದೇಣಿಗೆ ನೀಡಿದ್ದಾರೆ ಎಂದು ಬರೆದಿದ್ದಾರೆ.
ಅಕ್ಷಯ್ ಬಳಿ ತಮ್ಮ ಟ್ರಸ್ಟ್ ಬಗ್ಗೆ ಹೇಳಿಕೊಂಡಾಗ ಅವರು ತಕ್ಷಣ ರೂ. 1.5 ಕೋಟಿ ದೇಣಿಗೆ ನೀಡುವುದಾಗಿ ತಿಳಿಸಿದರು ಎಂದು ಲಾರೆನ್ಸ್ ತಿಳಿಸಿದ್ದಾರೆ.
Next Story