varthabharthi

ಗಲ್ಫ್ ಸುದ್ದಿ

ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತ್ವ ಅಭಿಯಾನಕ್ಕೆ ಮಕ್ಕಾ ಹರಂನಲ್ಲಿ ಚಾಲನೆ

ವಾರ್ತಾ ಭಾರತಿ : 2 Mar, 2020

ಮಕ್ಕಾ, ಮಾ.2: ಮಾರ್ಚ್ 1 ರಿಂದ ಕರ್ನಾಟಕ ರಾಜ್ಯಾದ್ಯಂತ ಆರಂಭಗೊಂಡ 'ಕರ್ನಾಟಕ ಮುಸ್ಲಿಂ ಜಮಾತ್' ಇದರ ಸದಸ್ಯತ್ವ ಅಭಿಯಾನದ ಅಂಗವಾಗಿ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಸದಸ್ಯತ್ವಕ್ಕೆ ಚಾಲನೆ ನೀಡಲಾಯಿತು.

ಕೆಸಿಎಪ್ ಸೌದಿ ಅರೇಬಿಯಾ ರಾಷ್ಟ್ರೀಯ ನಾಯಕ ಮೂಸ ಹಾಜಿ‌ ಕಿನ್ಯ‌ ಅವರಿಂದ ಸದಸ್ಯತ್ವದ ‌ಫಾರಂ ಸ್ವೀಕರಿಸುವ ಮೂಲಕ ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಅಭಿಯಾನವನ್ನು ಉದ್ಘಾಟಿಸಿದರು.

ಈ ವೇಳೆ ಎಸ್.ವೈ.ಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಎಸ್.ವೈ.ಎಸ್ ಇಸಾಬಾ ಕಾರ್ಯದರ್ಶಿ ಉಮರ್ ಸಖಾಫಿ ಎಡಪ್ಪಾಲ್, ಕೆಸಿಎಫ್ ಮಕ್ಕಾ ಸೆಕ್ಟರ್ ಅಧ್ಯಕ್ಷ ಫಾರೂಖ್ ಹನೀಫಿ, ಸಂಘಟನಾ ನಾಯಕ ಅಬ್ದುಲ್ ಹಮೀದ್ ಉಳ್ಳಾಲ್, ಖಲಂದರ್ ಶಾಫಿ ಅಸೈಗೋಳಿ, ಅಬ್ದುಲ್ಲ ಕಿನ್ಯ, ಖಾಲಿದ್ ಕಬಕ, ಅಬ್ದುಲ್ ಅಝೀಝ್ ಹನೀಫಿ ಕಾಯಾರ್, ರಿಯಾಝ್ ಮದನಿ ಬಂಟ್ವಾಳ, ಸಿದ್ದೀಖ್ ಸಅದಿ ಮಿತ್ತೂರು ಮುಂತಾದವರು ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)