varthabharthi


ಗಲ್ಫ್ ಸುದ್ದಿ

ಜಿಎಂಯು ‘ಜಾಗತಿಕ ಹಳೆಯ ವಿದ್ಯಾರ್ಥಿಗಳ ಶೃಂಗ 2020’ರಲ್ಲಿ ಜಾಗತಿಕ ಸಾಧಕರಿಗೆ ಪುರಸ್ಕಾರ ಪ್ರದಾನ

ವಾರ್ತಾ ಭಾರತಿ : 3 Mar, 2020

ಅಜ್ಮಾನ್ (ಯುಎಇ), ಮಾ. 3: ಇಲ್ಲಿಯ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಜಿಎಂಯು ಸ್ಟೂಡೆಂಟ್ಸ್ ಅಫೇರ್ಸ್ ವಿಭಾಗವು ಇತ್ತೀಚಿಗೆ ತುಂಬೆ ಮೆಡಿಸಿಟಿಯಲ್ಲಿ ‘ಜಿಎಂಯು ‘ಜಾಗತಿಕ ಹಳೆಯ ವಿದ್ಯಾರ್ಥಿಗಳ ಶೃಂಗ 2020’ನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಜಿಎಂಯು ಅಸಾಧಾರಣ ಸಾಧನೆಗಳನ್ನು ಮಾಡಿರುವ ತನ್ನ ಹಳೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನಿಸಿ ಸನ್ಮಾನಿಸಿತು.

ವಿಶ್ವಾದ್ಯಂತದಿಂದ ಜಿಎಂಯು ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಎಂಯು ಸ್ಥಾಪಕ ಹಾಗೂ ವಿಶ್ವಸ್ತ ಮಂಳಿಯ ಅಧ್ಯಕ್ಷ ಡಾ. ತುಂಬೆ ಮೊಯಿದೀನ್ ಅವರು ಜಿಎಂಯು ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನಿಸಿದರು. ಇದೇ ವೇಳೆ ಅಲುಮ್ನಿ ಇ-ನ್ಯೂಸ್ ಲೆಟರ್ ಮತ್ತು ಅಲುಮ್ನಿ ಪೋರ್ಟಲ್ ಅನ್ನೂ ಅವರು ಬಿಡುಗಡೆಗೊಳಿಸಿದರು.

ಹಳೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಜಿಎಂಯು ಚಾನ್ಸಲರ್ ಪ್ರೊ. ಹೋಶಂ ಹಾಮ್ದಿ ಅವರು ವಿವಿಯ ಇತ್ತೀಚಿನ ಮಹತ್ವದ ಸಾಧನೆಗಳ ಸ್ಥೂಲ ಚಿತ್ರಣ ನೀಡಿದರು. ಹಳೆಯ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವಿದ್ಯಾರ್ಥಿ ವೇತನಗಳು, ಜಿಎಂಯುದಲ್ಲಿ ಸಂಯೋಜಿತ ಬೋಧಕ ಹುದ್ದೆಗಳು, ಉದ್ಯೋಗಾವಕಾಶಗಳು, ಜಿಎಂಯುದ ಇ-ಲೈಬ್ರೆರಿ ಅಧ್ಯಯನ ಸಂಪನ್ಮೂಲಗಳ ಲಭ್ಯತೆ ಸೇರಿದಂತೆ ಹಲವಾರು ಸೌಲಭ್ಯಗಳನ್ನೂ ಅವರು ಪ್ರಕಟಿಸಿದರು.

ಪ್ರೊ. ಮಂದಾ ವೆಂಕಟರಮಣ ಅವರು ಸ್ವಾಗತಿಸಿದರು. ಪ್ರಶಸ್ತಿ ವಿಜೇತರು ಜಿಎಂಯುದಲ್ಲಿನ ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳ ಕುರಿತು ಮಾತನಾಡಿದರು.

ಜಿಎಂಯು ಹಳೆಯ ವಿದ್ಯಾರ್ಥಿಗಳಲ್ಲಿ ಪ್ರಸ್ತುತ 1803 ಪದವಿಧರರಿದ್ದು,ಈ ಪೈಕಿ ಶೇ.70ರಷ್ಟು ಮಹಿಳೆಯರಿದ್ದರೆ ಶೇ.30ರಷ್ಟು ಪುರುಷರಿದ್ದು ವಿಶ್ವಾದ್ಯಂತ ಹರಡಿಕೊಂಡಿದ್ದಾರೆ.

ಪ್ರಶಸ್ತಿ ವಿಜೇತರ ವಿವರ

ಹೆಲ್ತ್ ಕೇರ್: ಸರಕಾರಿ ಸೇವೆ ಯುಎಇ ; ಡಾ. ನೋಹಾ ಯಾಸಿನ್, ಡಾ. ಅಸ್ಮಾ ಅಬ್ದುಲ್ಲಾಹಿ ಅಲಿ, ಆಯಿಷಾ ಮುಹಮ್ಮದ್,  ಅಬ್ದುಲ್ಲಾ ಕಾಜೂರ್ ಅಲ್ ನುಯೈಮಿ.

ಹೆಲ್ತ್ ಕೇರ್ ರಿಸರ್ಚ್ ಡಾ. ಅಹ್ಮದ್ ಅಶ್ರಫ್ ಫಖ್ರಿ ಘಝಲ್, ಹೆಲ್ತ್ ಕೇರ್ ಡೆಲಿವರಿ ಸಿಸ್ಟಂ: ಎಂಟರ್‌ ಪ್ರೂನರ್‌ಶಿಪ್ ಡಾ. ಇಸ್ಮಾಯೀಲ್ ಸಯೀದ್, ಜಮೀಲಾ ಆರಿಫ್ ಹುಸೈನ್, ಡಾ. ಶೀತಲ ಬಂಭಾನಿ, ಹೆಲ್ತ್ ಕೇರ್ ಡೆಲಿವರಿ ಸಿಸ್ಟಮ್: ಎನ್‌ಜಿಒ/ಹ್ಯುಮಾನಿಟೇರಿಯನ್ ಸರ್ವಿಸ್ ಡಾ. ಫರಾಝ್ ಖಾಲಿದ್ ಮುಹಮ್ಮದ್ ಅಲ್‌ಮಿಹೈರಬಿ, ಆರ್ಟ್ಸ್ : ಡಾ. ಮಾರ್ವಾ ಅಬ್ದುಲ್‌ ವಾಹಿದ್ ಅಲ್‌ ಅಲ್ವಾನಿ ಪ್ರಶಸ್ತಿ ಪಡೆದುಕೊಂಡರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)