ಮಹಮ್ಮದ್(ಮಮ್ಮು)
ಪುತ್ತೂರು: ನಗರದ ಗೋಳಿಕಟ್ಟೆ ನಿವಾಸಿ ದಿ. ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ಯಾನೆ ಮಮ್ಮು(42) ಹೃದಯಾಘಾತದಿಂದ ಶುಕ್ರವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ವೃತ್ತಿಯಲ್ಲಿ ಪೈಂಟರ್ ಆಗಿದ್ದ ಮಮ್ಮು ಅವರಿಗೆ ಮುಸ್ಸಂಜೆ ವೇಳೆಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ.
ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story