varthabharthi


ಸಿನಿಮಾ

‘ಏಕ್ ವಿಲನ್’ ಸೀಕ್ವೆಲ್‌ನಲ್ಲಿ ದಿಶಾ ಪಟಾನಿ

ವಾರ್ತಾ ಭಾರತಿ : 8 Mar, 2020

ಕೆಲವು ವಾರಗಳ ಹಿಂದೆ ಜಾನ್ ಅಬ್ರಹಾಂ ಹಾಗೂ ಆದಿತ್ಯ ರಾಯ್ ಕಪೂರ್ ಅವರು ಮೋಹಿತ್ ಸೂರಿ ಅವರ ‘ಏಕ್ ವಿಲನ್-2’ ಚಿತ್ರದಲ್ಲಿ ನಟಿಸುವುದು ದೃಢಪಟ್ಟಿತ್ತು. ಆದರೆ, ಈಗ ಇದೇ ಚಿತ್ರದಲ್ಲಿ ನಟಿಸಲು ದಿಶಾ ಪಟಾನಿ ಸಹಿ ಹಾಕಿದ್ದಾರೆ. ನಿರ್ದೇಶಕ ಮೋಹಿತ್ ಸೂರಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ನಟಿ ದಿಶಾ ಪಟಾನಿ ಅವರನ್ನು ಮೋಹಿತ್ ಸೂರಿ ಪ್ರಶಂಸಿಸಿದ್ದಾರೆ ಹಾಗೂ ‘ಮಲಾಂಗ್’ನ ಬಳಿಕ ತಾನು ಆಕೆಯೊಂದಿಗೆ ಮತ್ತೆ ಈ ಚಿತ್ರದಲ್ಲಿ ಕೆಲಸ ಮಾಡಲು ಯಾಕೆ ಒಪ್ಪಿಕೊಂಡೆ ಎಂಬುದನ್ನು ವಿವರಿಸಿದ್ದಾರೆ. ‘‘ನಿಮ್ಮ ಚಿತ್ರಗಳಲ್ಲಿ ನಾಯಕರು ಮಾಡುವಂತೆ ಸಾಹಸ ಮಾಡಲು ನಾನು ಬಯಸುತ್ತೇನೆ. ನಾನು ನಾಯಕ ಆಗಲು ಬಯಸುತ್ತೇನೆ ಎಂದು ನನ್ನ ಬಳಿ ಬಂದು ಹೇಳಿದ ಮೊದಲ ನಾಯಕಿ ದಿಶಾ’’. ಅದಕ್ಕೆ ನಾನು, ಹಾಗಾದರೆ ನೀವು ‘ಏಕ್ ವಿಲನ್’ ಸೀಕ್ವಲ್‌ನಲ್ಲಿ ನಟಿಸುತ್ತೀರಾ ಎಂದು ಕೇಳಿದೆ. ಅದಕ್ಕೆ ಅವರು ಒಪ್ಪಿಕೊಂಡರು ಎಂದು ಮೋಹಿತ್ ಸೂರಿ ಹೇಳಿದ್ದಾರೆ. ಈ ಚಿತ್ರದಲ್ಲಿ ದಿಶಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಮಲಾಂಗ್’ನಲ್ಲಿ ಅವರು ಆದಿತ್ಯ ರಾಯ್ ಕಪೂರ್ ಅವರೊಂದಿಗೆ ನಟಿಸಿದ್ದರು. ಆದರೆ, ಇಲ್ಲಿ ಜಾನ್ ಅಬ್ರಹಾಂ ಅವರೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರೆ. ದಿಶಾ ಅವರ ಪಾತ್ರಕ್ಕೆ ‘ಗೋನ್ ಗರ್ಲ್’ ಆಧಾರವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)