varthabharthi


ಸಿನಿಮಾ

ವಿಕ್ಕಿ ಕೌಶಲ್ ಈಗ ಉಧಂಸಿಂಗ್

ವಾರ್ತಾ ಭಾರತಿ : 8 Mar, 2020

ತನ್ನ ಅಭಿನಯಿಸಿರುವ ಭೂತ್ ಪಾರ್ಟ್ ಓನ್: ದಿ ಹಾಂಟೆಡ್ ಶಿಪ್ ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ವಿಕ್ಕಿ ಕೌಶಲ್, ರಶ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹೌದು. ಭಾರತದ ಹುತಾತ್ಮ ಸ್ವಾತಂತ್ರ ಹೋರಾಟಗಾರ ಉಧಂ ಸಿಂಗ್ ಅವರ ಬಯೋಪಿಕ್ ಚಿತ್ರದ ಶೂಟಿಂಗ್ ರಶ್ಯದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ಉಧಂ ಸಿಂಗ್ ಪಾತ್ರದಲ್ಲಿ ವಿಕ್ಕಿಕೌಶಲ್ ನಟಿಸಿದ್ದಾರೆ.

  ಉಧಂಸಿಂಗ್ ಚಿತ್ರದ ಶೂಟಿಂಗ್ ಅಂತಿಮಹಂತದಲ್ಲಿದೆ. ಈ ಚಿತ್ರದ ಕಥೆಯು ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದು, ಅತ್ಯಂತ ತಾದಾತ್ಮತೆಯಿಂದ ನಟಿಸಿದ್ದಾಗಿ ವಿಕ್ಕಿ ಕೌಶಲ್ ಹೇಳುತ್ತಾರೆ. ಸಣ್ಣದಿರುವಾಗಲೇ ತಾನು ಕ್ರಾಂತಿಕಾರಿ ಹೋರಾಟಗಾರನಾದ ಉಧಂಸಿಂಗ್‌ನ ವೀರಗಾಥೆಯನ್ನು ಕೇಳುತ್ತಲೇ ಬೆಳೆದಿದ್ದಾಗಿ ಅವರು ಹೇಳುತ್ತಾರೆ. ಭಾರತದ ಸ್ವಾತಂತ್ರ ಸಂಗ್ರಾಮದ ರಕ್ತಸಿಕ್ತ ಅಧ್ಯಾಯವೆನಿಸಿರುವ ಜಲಿಯಾನಾವಾಲ್ ಬಾಗ್ ಹತ್ಯಾಕಾಂಡಕ್ಕೆ ಕಾರಣನಾದ ಬ್ರಿಟಿಷ್ ಅಧಿಕಾರಿ ಜನರಲ್ ಮೈಕೆಲ್ ಓ’ ಡಯರ್‌ನನ್ನು ಹತ್ಯೆಗೈದ ಸ್ವಾತಂತ್ರ ಹೋರಾಟಗಾರನಾದ ಉಧಂಸಿಂಗ್‌ನನ್ನು ಆನಂತರ ಬ್ರಿಟಿಷ್ ಆಡಳಿತ ಗಲ್ಲಿಗೇರಿಸುತ್ತದೆ.

 ಪೀಕು,ಪಿಂಕ್, ಮದ್ರಾಸ್ ಕಫೆಯಂತಹ ಸ್ಮರಣೀಯ ಚಿತ್ರಗಳನ್ನು ನೀಡಿರುವ ಶೂಜಿತ್ ಸರ್ಕಾರ್ ನಿರ್ದೇಶನದ ಉಧಂ ಸಿಂಗ್ ಚಿತ್ರಕ್ಕೆ ಶುಭೇಂದು ಭಟ್ಟಾಚಾರ್ಯ ಚಿತ್ರಕಥೆ ಬರೆದಿದ್ದಾರೆ. ಉದಯೋನ್ಮುಖ ನಟಿ ಬನಿತಾ ಸಂಧು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಉಧಂ ಸಿಂಗ್, ಗಾಂಧಿಜಯಂತಿಯ ದಿನವಾದ ಅಕ್ಟೋಬರ್ 2ರಂದು ತೆರೆಗೆ ಬರಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)