varthabharthi

ನಿಧನ

ಎಂ ಮೋಹನ್ ಶೇಟ್

ವಾರ್ತಾ ಭಾರತಿ : 14 Mar, 2020

ಕೊಣಾಜೆ : ಮೂಲತಃ ಮಂಗಳೂರಿನವರಾದ ಎಂ. ಮೋಹನ್ ಶೇಟ್ (80 ) ಅಲ್ಪಕಾಲದ ಅಸೌಖ್ಯದಿಂದಾಗಿ ಬೆಂಗಳೂರಿನ ಹನುಮಂತ ನಗರದ ಸ್ವಗೃಹದಲ್ಲಿ ಇಂದು  ಬೆಳಿಗ್ಗೆ ನಿಧನರಾದರು.

"ಬೆಂಗಳೂರು  ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ" ಸಂಸ್ಥಾಪಕ ಅಧ್ಯಕ್ಷರಾಗಿ, ನಂತರ ಬೆಂಗಳೂರು ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ದೈವಜ್ಞ ಬ್ರಾಹ್ಮಣ ಗುರುಪೀಠ ಸಂಸ್ಥಾಪನಾ ಟ್ರಸ್ಟ್ ಸ್ಥಾಪಿಸಿ ಅದರ ಅಧ್ಯಕ್ಷರಾಗಿ, 1983 ರಲ್ಲಿ ಹೊನ್ನಾವರದ ಶ್ರೀ ಕ್ಷೇತ್ರ ಕರ್ಕಿಯಲ್ಲಿ ಶ್ರೀ ಜ್ಞಾನೇಶ್ವರೀ ಮಹಾ ಸಂಸ್ಥಾನ - ದೈವಜ್ಞ ಬ್ರಾಹ್ಮಣ ಮಠದ ಸಂಸ್ಥಾಪನೆಗೆ ಕಾರಣಕರ್ತರಾಗಿದ್ದರು.

ಮೃತರು ಪತ್ನಿ, ಇಬ್ಬರು  ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)