varthabharthi

ಗಲ್ಫ್ ಸುದ್ದಿ

ಕೊರೊನಾವೈರಸ್: ಅಂತರ್‌ರಾಷ್ಟ್ರೀಯ ವಿಮಾನ ಯಾನವನ್ನು ನಿಲ್ಲಿಸಿದ ಸೌದಿ ಅರೇಬಿಯ

ವಾರ್ತಾ ಭಾರತಿ : 14 Mar, 2020

ರಿಯಾದ್ (ಸೌದಿ ಅರೇಬಿಯ), ಮಾ. 14: ಕೊರೋನವೈರಸ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯವು ಶನಿವಾರ ಎರಡು ವಾರಗಳ ಅವಧಿಗೆ ಅಂತರ್‌ರಾಷ್ಟ್ರೀಯ ವಿಮಾನ ಹಾರಾಟಗಳನ್ನು ರದ್ದುಪಡಿಸಿದೆ.

‘‘ಕೊರೋನವೈರಸ್ ಸೋಂಕು ಹರಡುವುದನ್ನು ತಡೆಯುವ ಸೌದಿ ಅರೇಬಿಯದ ಪ್ರಯತ್ನಗಳ ಭಾಗವಾಗಿ, ಮಾರ್ಚ್ 15ರಿಂದ ಎರಡು ವಾರಗಳ ಕಾಲ ಅಂತರ್‌ರಾಷ್ಟ್ರೀಯ ವಿಮಾನ ಹಾರಾಟಗಳನ್ನು ನಿಲ್ಲಿಸಲು ಸರಕಾರ ನಿರ್ಧರಿಸಿದೆ’’ ಎಂದು ಸೌದಿ ಅರೇಬಿಯದ ವಿದೇಶ ಸಚಿವಾಲಯ ಟ್ವೀಟ್ ಮಾಡಿದೆ.

ಸೌದಿ ಅರೇಬಿಯದಲ್ಲಿ ಈವರೆಗೆ 86 ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೌದಿ ಅರೇಬಿಯವು ಈಗಾಗಲೇ ಕೆಲವು ದೇಶಗಳಿಗೆ ವಿಮಾನ ಯಾನವನ್ನು ನಿಲ್ಲಿಸಿದೆ ಹಾಗೂ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಿದೆ. ಪವಿತ್ರ ಸ್ಥಳಗಳಾದ ಮಕ್ಕಾ ಮತ್ತು ಮದೀನಾಗಳ ‘ಉಮ್ರಾ’ ಯಾತ್ರೆಗಳನ್ನೂ ಅಲ್ಲಿನ ಸರಕಾರ ಈಗಾಗಲೇ ಸ್ಥಗಿತಗೊಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)