varthabharthi

ಗಲ್ಫ್ ಸುದ್ದಿ

ಕೋರೋನ ಭೀತಿ: ಸೌದಿಯಲ್ಲಿ ಮುಂದುವರಿದ ಬಂದ್

ವಾರ್ತಾ ಭಾರತಿ : 17 Mar, 2020
ವರದಿ: ರಲಿಯಾ ಸಿದ್ದೀಕ್ ಪರ್ಲಿಯಾ

ಜಿದ್ದಾ, ಮಾ.17: ಕೊರೋನ ವೈರಸ್ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ನಗರದಲ್ಲಿ ಘೋಷಿಸಲಾಗಿದ್ದ ಅನಿರ್ದಿಷ್ಟಾವಧಿ ಬಂದ್ 3ನೇ ದಿನಕ್ಕೆ ಕಾಲಿಟ್ಟಿದೆ.
ಮಂಗಳವಾರ ಕೂಡಾ ನಗರದ ಮಾಲ್‌ಗಳು, ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ಜನ ಸಂಚಾರವಿಲ್ಲದೆ ರಸ್ತೆಗಳು, ಮಾರ್ಕೆಟ್‌ಗಳು ಬಿಕೊ ಎನ್ನುತ್ತಿವೆ.
ವೈರಸ್ ಸೋಂಕು ಹರಡುವ ಭೀತಿಯಲ್ಲಿ ಮಾ.15ರಂದೇ ನಗರದ ವಿವಿಧೆಡೆಗಳಿಗೆ ಭೇಟಿ ನೀಡಿರುವ ಅಧಿಕಾರಿಗಳು ಮಾಲ್‌ಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಆದರೆ ಆಹಾರ ಸಾಮಗ್ರಿ ಮಾರಾಟ ಮಳಿಗೆಗಳು, ಹೋಟೆಲ್, ಸೂಪರ್ ಮಾರ್ಕೆಟ್‌ಗಳು ಹಾಗೂ ಫಾರ್ಮಸಿಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ.

ಕೊರೋನ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಪರ್ ಮಾರ್ಕೆಟ್‌ಗಳಲ್ಲಿ ಕೈಗವಸುಗಳನ್ನು ವಿತರಿಸಲಾಗುತ್ತಿದೆ. ಸೌದಿಯಲ್ಲಿ ಇದುವರೆಗೆ 133 ಕೊರೋನ ಪ್ರಕರಣಗಳು ದೃಡಪಟ್ಟಿದ್ದು, 15 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಸರಕಾರ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)