varthabharthi

ಕ್ರೀಡೆ

ರಾಷ್ಟ್ರೀಯ ಶಿಬಿರಗಳನ್ನು ಮುಂದೂಡಿದ ಸಾಯ್

ವಾರ್ತಾ ಭಾರತಿ : 17 Mar, 2020

ಹೊಸದಿಲ್ಲಿ, ಮಾ.17: ಕೊರೋನ ವೈರಸ್ ವಿರುದ್ಧ ಹೋರಾಡಲು ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್)ಅಗ್ರಮಾನ್ಯ ಅಥ್ಲೀಟ್‌ಗಳ ಟೋಕಿಯೊ ಒಲಿಂಪಿಕ್ಸ್ ತಯಾರಿ ಶಿಬಿರ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರೀಯ ಶಿಬಿರಗಳನ್ನು ಮುಂದೂಡಿದೆ.

ಭಾರತದಲ್ಲಿ ಕೋವಿಡ್-19 ವೈರಸ್‌ನಿಂದ ಬಾಧಿತವಾಗಿರುವವರ ಸಂಖ್ಯೆ ಕಳೆದ ಕೆಲವೇ ದಿನಗಳಲ್ಲಿ 100ರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾ ಸಚಿವಾಲಯ ಹಾಗೂ ಸಾಯ್, ಆರೋಗ್ಯ ಸಚಿವಾಲಯದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ತನ್ನದೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿದೆ. ರಾಷ್ಟ್ರೀಯ ಶಿಬಿರಗಳನ್ನು ಮುಂದೂಡಿದ್ದಲ್ಲದೆ, ಕೇಂದ್ರ ಹಾಗೂ ರಾಜ್ಯ ಸರಕಾರದ ಅನುಮತಿ ಇಲ್ಲದೆ ಯಾವುದೇ ಟೂರ್ನಮೆಂಟ್‌ಗಳು, ಸೆಮಿನಾರ್‌ಗಳು ಅಥವಾ ಕಾರ್ಯಾಗಾರಗಳನ್ನು ನಡೆಸದಂತೆ ಸಾಯ್ ಸೂಚಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)