varthabharthi

ಕ್ರೀಡೆ

ಎಎಫ್‌ಸಿ ಕಪ್ ಟೂರ್ನಮೆಂಟ್ ಮುಂದೂಡಿಕೆ

ವಾರ್ತಾ ಭಾರತಿ : 19 Mar, 2020

ಹಾಂಕಾಂಗ್,ಮಾ.18: ವಿಶ್ವದೆಲ್ಲೆಡೆಯ ಕ್ರೀಡಾ ಸ್ಪರ್ಧೆಗಳಿಗೆ ಕೊರೋನ ವೈರಸ್ ಕಾಟ ಮುಂದುವರಿದಿದ್ದು, ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್ ಎಎಫ್‌ಸಿ ಕಪ್ ಟೂರ್ನಮೆಂಟ್‌ನ ಎಲ್ಲ ಪಂದ್ಯಗಳನ್ನು ಮುಂದೂಡಿದೆ.

ಕೋವಿಡ್-19 ವೈರಸ್ ಭೀತಿಯ ಹಿನ್ನೆಲೆಯಲ್ಲಿ ಹೆಚ್ಚಿನ ರಾಷ್ಟ್ರದ ಸರಕಾರಗಳು ಪ್ರಯಾಣದ ಮೇಲೆ ನಿರ್ಬಂಧ ಹೇರಿರುವ ಕಾರಣ ಎಲ್ಲ ಎಎಫ್‌ಸಿ ಕಪ್-2020ರ ಪಂದ್ಯಗಳನ್ನು ಮುಂದೂಡಲು ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್ ಬುಧವಾರ ನಿರ್ಧಾರ ಕೈಗೊಂಡಿದೆ ಎಂದು ಎಎಫ್‌ಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಎಎಫ್‌ಸಿ ಕಪ್‌ನಲ್ಲಿ ಜೋರ್ಡನ್, ಲೆಬನಾನ್, ಸಿಂಗಾಪುರ,ಬಾಂಗ್ಲಾದೇಶ ಹಾಗೂ ತಜಕಿಸ್ತಾನ ದೇಶಗಳು ಭಾಗವಹಿಸಲಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)