varthabharthi

ಕ್ರೀಡೆ

ಟೋಕಿಯೊ ಒಲಿಂಪಿಕ್ಸ್ ಟಾರ್ಚ್ ರಿಲೇ: ಮಾ. 26ರಂದು ಚಾಲನೆ

ವಾರ್ತಾ ಭಾರತಿ : 19 Mar, 2020

ಟೋಕಿಯೊ, ಮಾ.18: ಟಾರ್ಚ್ ರಿಲೇ ಯಾವಾಗಲೂ ಆಧುನಿಕ ಒಲಿಂಪಿಕ್ಸ್‌ನಲ್ಲಿ ಒಂದು ಭಾಗವಾಗಿರಲಿಲ್ಲ, ಒಲಿಂಪಿಕ್ಸ್ 1896ರಲ್ಲಿ ಪ್ರಾರಂಭಗೊಂಡಿತು. ಆದರೆ ರಿಲೇ ಸಂಪ್ರದಾಯವು ಅಡಾಲ್ಫ್ ಹಿಟ್ಲರ್‌ನ ಕಾಲದಲ್ಲಿ ಅಂದರೆ 1936ರಲ್ಲಿ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಪ್ರಾರಂಭಗೊಂಡಿತು. ಇದು ಕಾರ್ಲ್ ಡೈಮ್‌ನ ಕನಸಿನ ಕೂಸು. ಅವರು ಸಂಘಟನಾ ಸಮಿತಿಯ ಮುಖ್ಯಸ್ಥರಾಗಿದ್ದರು.

 ಜಪಾನ್ ಟೋಕಿಯೊ ಒಲಿಂಪಿಕ್ಸ್ ರಿಲೇಯನ್ನು ಮಾರ್ಚ್ 26 ರಂದು ಈಶಾನ್ಯ ಫುಕುಶಿಮಾ ಪ್ರಾಂತ್ಯದಲ್ಲಿ ಪ್ರಾರಂಭಿಸಲಿದೆ.

ಟೋನಿ ಪೆರೊಟ್ಟೆಟ್, 2004ರ ಅಥೆನ್ಸ್ ಒಲಿಂಪಿಕ್ಸ್‌ಗೆ ಹೊಂದಿಕೆಯಾಗುವಂತೆ ಪ್ರಕಟಿಸಿದ 2004 ರ‘ದಿ ನೇಕೆಡ್ ಒಲಿಂಪಿಕ್ಸ್’ ಪುಸ್ತಕದಲ್ಲಿ - ರಿಲೇಯನ್ನು ಸ್ವಾಧೀನಪಡಿಸಿಕೊಳ್ಳುವ ನಾಜಿ ಆಡಳಿತದ ವಿರೋಧಾಭಾಸವನ್ನು ಬರೆದಿದ್ದಾರೆ. ಟಾರ್ಚ್ ರೇಸ್ ಇಂದು ಅಂತರ್‌ರಾಷ್ಟ್ರೀಯ ಸಹೋದರತ್ವವನ್ನು ಸಂಕೇತಿಸಲು ಬಂದಿದೆ ಮತ್ತು ಇದು ನಮ್ಮದೇ ಆದ ಆಡಂಬರದಿಂದ ತುಂಬಿದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಗಳ ಕೇಂದ್ರಬಿಂದುವಾಗಿದೆ ಎಂದು ಪೆರೊಟ್ಟೆಟ್ ಬರೆದಿದ್ದಾರೆ.

   ಜುಲೈ 20, 1936ರಂದು ಒಲಿಂಪಿಕ್ಸ್ ಜ್ಯೋತಿಯೊಂದಿಗೆ ಹೊರಟ ಮೊದಲ ವ್ಯಕ್ತಿ ಗ್ರೀಕ್ ಕ್ರೀಡಾಪಟು ಕ್ಯಾನ್ಸಾಂಟಿನ್ ಕೊಂಡೈಲಿಸ್.

  ಟಾರ್ಚ್ ಗ್ರೀಸ್, ಬಲ್ಗೇರಿಯಾ, ಯುಗೊಸ್ಲಾವಿಯ, ಹಂಗೇರಿ, ಆಸ್ಟ್ರಿಯಾ, ಜೆಕೊಸ್ಲೊವಾಕಿಯಾ ಮತ್ತು ಜರ್ಮನಿಯ ಮೂಲಕ ಹಾದು ಹೋಗಿತ್ತು. ಪ್ರತಿಯೊಬ್ಬ ಓಟಗಾರ ಒಂದು ಕಿಲೋ ಮೀಟರ್ - ಅಥವಾ 0.62 ಮೈಲುಗಳಷ್ಟು ದೂರವನ್ನು ಒಲಿಂಪಿಕ್ಸ್ ಕ್ರೀಡಾ ಜ್ಯೋತಿಯೊಂದಿಗೆ ಓಡಿದ್ದಾನೆ. ಹಿಟ್ಲರ್ ಗ್ರೀಕ್ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಮೆಚ್ಚಿಕೊಂಡಿದ್ದನು. ಜರ್ಮನಿ ರಾಷ್ಟ್ರದ ಪ್ರಾಬಲ್ಯ, ಪರಿಪೂರ್ಣತೆಯ ಬಗ್ಗೆ ತನ್ನ ಕಲ್ಪನೆಯನ್ನು ಒಲಿಂಪಿಕ್ಸ್ ಮೂಲಕ ಉತ್ತೇಜಿಸಲು ಬಯಸಿದ್ದ ಎಂದು ಪೆರೊಟ್ಟೆಟ್ ಬರೆದಿದ್ದಾರೆ.

    

    ಹಿಟ್ಲರ್ ಒಲಿಂಪಿಕ್ಸ್‌ನ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದನು. ಇದರ ಪ್ರಚಾರಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಸುರಿದಿದ್ದನು. ಟಾರ್ಚ್ ರಿಲೇ ಸಾಗುವ ಮಾರ್ಗದ ಪ್ರತಿಯೊಂದು ಹಂತದಿಂದಲೂ ರೇಡಿಯೊ ವರದಿಗಳನ್ನು ಪ್ರಸಾರ ಮಾಡಿತ್ತು. ಮೊದಲ ಒಲಿಂಪಿಕ್ಸ್ ಜ್ವಾಲೆಯು 1928ರ ಆಮ್ಸ್ ಸ್ಟರ್‌ಡ್ಯಾಮ್ ಕ್ರೀಡಾಕೂಟದಲ್ಲಿ ಕಾಣಿಸಿಕೊಂಡಿತು, ನಂತರ ಮತ್ತೆ 1932ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಕಾಣಿಸಿಕೊಂಡಿತು. 1928 ಮತ್ತು 1932ರ ಜ್ವ್ವಾಲೆಗಳ ಬಗ್ಗೆ ಹೆಚ್ಚಿ ನ ವಿವರ ಇಲ್ಲ. ಆದರೆ ಅವು ಒಲಿಂಪಿಯಾದಲ್ಲಿ ಬೆಳಗಲಿಲ್ಲ. ಸೈಟ್‌ನಲ್ಲಿ ಬೆಳಗಲ್ಪಟ್ಟವು ಎಂದು ಇಂಟರ್‌ನ್ಯಾಷನಲ್ ಸೊಸೈಟಿ ಆಫ್ ಒಲಿಂಪಿಕ್ಸ್ ಇತಿಹಾಸಕಾರರ ಮಾಜಿ ಅಧ್ಯಕ್ಷ ಡಾ. ಬಿಲ್ ಮಲ್ಲನ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

     1936ರ ವರೆಗೆ ಯಾವುದೇ ರಿಲೇ ಇರಲಿಲ್ಲ. ಬಳಿಕ ಒಲಿಂಪಿಕ್ಸ್ ರಿಲೇ ನಿರಂತರವಾಗಿ ಪ್ರತಿಯೊಂದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ಕಂಡು ಬಂದಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಒಲಿಂಪಿಕ್ಸ್ ರದ್ದುಗೊಂಡಿತು. ಟೋಕಿಯೊ 1940ರ ಕ್ರೀಡಾಕೂಟವನ್ನು ನಡೆಸಬೇಕಿತ್ತು. 1948ರಲ್ಲಿ ಲಂಡನ್‌ನಲ್ಲಿ ಪುನರಾರಂಭಗೊಂಡಿತು. ಆಗ ಸಾಕಷ್ಟು ಬದಲಾವಣೆ ಆಗಿತ್ತು. ಅಷ್ಟರ ತನಕ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಜ್ಯೋತಿಯು ಗ್ರೀಸ್‌ನ ಪ್ರಾಚೀನ ಒಲಿಂಪಿಯಾದಲ್ಲಿ ಯಾವಾಗಲೂ ಬೆಳಗುತ್ತಿತ್ತು.ಆದರೆ ಚಳಿಗಾಲದ ಒಲಿಂಪಿಕ್ಸ್ ಜ್ಯೋತಿಯನ್ನು ಯಾವಾಗಲೂ ಅಲ್ಲಿ ಬೆಳಗಿಸುತ್ತಿರಲಿಲ್ಲ. 1952 ಮತ್ತು 1960ರ ಚಳಿಗಾಲದ ಒಲಿಂಪಿಕ್ಸ್ ಜ್ಯೋತಿಯನ್ನು ನಾರ್ವೆಯ ಮೂರ್ಗೆಡಾಲ್‌ಲ್ಲಿ ಬೆಳಗಿಸಲಾಯಿತು.

 1956ರ ಚಳಿಗಾಲದ ಕ್ರೀಡಾಕೂಟಕ್ಕಾಗಿ ರೋಮ್‌ನಲ್ಲಿ ಜ್ಯೋತಿಯನ್ನು ಬೆಳಗಿಸಲಾಯಿತು. ತೀರಾ ಇತ್ತೀಚೆಗೆ, ನಾರ್ವೆಯ ಲಿಲ್ಲೆಹ್ಯಾರ್ಮನಲ್ಲಿ 1994ರ ಚಳಿಗಾಲದ ಒಲಿಂಪಿಕ್ಸ್‌ಗಾಗಿ ಗ್ರೀಸ್‌ನಲ್ಲಿ ಮತ್ತು ನಾರ್ವೆಯಲ್ಲಿ ಜ್ಯೋತಿಯನ್ನು ಬೆಳಗಿಸಲಾಯಿತು.

    1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ರಿಲೇ ವಾಣಿಜ್ಯೀಕರಣಗೊಂಡಿತು. 1992ರ ಬಾರ್ಸಿಲೋನಾ ಒಲಿಂಪಿಕ್ಸ್ ಕ್ರೀಡಾಕೂಟದ ಪ್ರಾಯೋಜಕತ್ವವನ್ನು ಕೋಕಾ-ಕೋಲಾ ವಹಿಸಿಕೊಂಡಿತು. 1984ರಲ್ಲಿ ಒಲಿಂಪಿಕ್ಸ್ ಜ್ಯೋತಿ ರಿಲೇ ವಾಣಿಜ್ಯೀಕರಣಗೊಂಡಿರುವುದು ಗ್ರೀಸ್‌ಗೆ ಇಷ್ಟವಾಗಲಿಲ್ಲ ಮತ್ತು ಒಲಿಂಪಿಯಾದಲ್ಲಿ ಲಾಸ್ ಏಂಜಲೀಸ್‌ಗೆ ಜ್ಯೋತಿಯನ್ನು ಬೆಳಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿತ್ತು ಎಂದು ಮಲ್ಲನ್ ಬರೆದಿದ್ದಾರೆ.

    2008 ರ ಬೀಜಿಂಗ್ ಒಲಿಂಪಿಕ್ಸ್ ಟಾರ್ಚ್ ರಿಲೇ ತೊಂದರೆಗೆ ಸಿಲುಕಿತು. ಚೀನೀ ರಿಲೇ, ದೇಶಾದ್ಯಂತ ಸುತ್ತ ತೊಡಗಿದಾಗ ಇದನ್ನು ಚೀನಾ ವಿರೋಧಿ ಮತ್ತು ಟಿಬೆಟ್ ಪರ ಪ್ರತಿಭಟನೆಗಳು ಗುರಿಯಾಗಿಸಿಕೊಂಡವು. ಚೀನಾ ತನ್ನ ದೇಶೀಯ ಮಾರ್ಗದಲ್ಲಿ ಸೇರಿಸಲು ಬಯಸಿದಾಗ ತೈವಾನ್ ರಿಲೇಯನ್ನು ಬಹಿಷ್ಕರಿಸಿತು . ಇದು ಸ್ವತಂತ್ರ ಆಡಳಿತ ಹೊಂದಿರುವ ದ್ವೀಪದ ಮೇಲೆ ಚೀನಾದ ಸಾರ್ವಭೌಮತ್ವವನ್ನು ಸೂಚಿಸುತ್ತದೆ. 1949ರ ಅಂತರ್‌ಯುದ್ಧದಲ್ಲಿ ಬೇರ್ಪಟ್ಟಾಗಿನಿಂದ ಚೀನಾದ ಸರ್ವಾಧಿಕಾರಿ ಸರ್ಕಾರವು ತೈವಾನ್‌ನ್ನು ದಂಗೆಕೋರ ಪ್ರಾಂತ್ಯವೆಂದು ಪರಿಗಣಿಸಿದೆ. ಚೀನಾ ಗಣರಾಜ್ಯ ಎಂದು ಕರೆಯಲ್ಪಡುವ ತೈವಾನ್ ಸ್ವತಂತ್ರ ರಾಷ್ಟ್ರವಾಗಿದೆೆ. ಆ ಸಮಯದಲ್ಲಿನ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಐಒಸಿ ಅಧ್ಯಕ್ಷ ಜಾಕ್ವೆಸ್ ರೊಗ್ಗೆ ಒಲಿಂಪಿಕ್ಸ್ ಮತ್ತು ರಿಲೇ ಬಿಕ್ಕಟ್ಟಿನಲ್ಲಿದೆ ಎಂದು ಹೇಳಲು ಕಾರಣವಾಯಿತು.

 ಬೀಜಿಂಗ್ ಒಲಿಂಪಿಕ್ಸ್ ಮುಗಿದ ನಂತರ ಟಾರ್ಚ್ ರಿಲೇಯು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಂಚರಿಸುವುದನ್ನು ನಿಲ್ಲಿಸಿತು.      

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)