varthabharthi

ಗಲ್ಫ್ ಸುದ್ದಿ

ಕೊರೋನ ವೈರಸ್ ಭೀತಿ: ಜಿದ್ದಾದ ಹಲವೆಡೆ ನಡೆಯದ ಜುಮಾ ನಮಾಝ್

ವಾರ್ತಾ ಭಾರತಿ : 20 Mar, 2020
ವರದಿ : ರಲಿಯಾ ಸಿದ್ದೀಕ್, ಪರ್ಲಿಯಾ

ಜಿದ್ದಾ (ಸೌದಿ ಅರೇಬಿಯಾ), ಮಾ.20: ಕೊರೋನ ವೈರಸ್ ಹರಡದಂತೆ ತೆಡೆಯುವ ಉದ್ದೇಶದಿಂದ ಸರಕಾರ ಆದೇಶದ ಹಿನ್ನೆಲೆಯಲ್ಲಿ ಜಿದ್ದಾದ ಹಲವೆಡೆ ಜುಮಾ ನಮಾಝ್ ನಡೆಯಲಿಲ್ಲ. ನಗರದ ಮಸೀದಿಗಳನ್ನು ಮುಚ್ಚಲಾಗಿತ್ತು. ಜನ ಸಂಚಾರವಿಲ್ಲದೆ ನಗರದಾದ್ಯಂತ ಸ್ಮಶಾನ ಮೌನ ಆವರಿಸಿದೆ.

ಮಾ. 15 ರಂದೇ ನಗರದ ಎಲ್ಲ ಮಾಲ್ ಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಬಳಿಕ ಹಂತ ಹಂತವಾಗಿ ಕೆಲ ಸರಕಾರಿ ಸಂಸ್ಥೆಗಳು, ಸೆಲೂನ್ ಗಳನ್ನು ಮುಚ್ಚಲಾಗಿದೆ.

ಬಂದ್ ನಿಂದ ಹೋಟೆದಲ್ ಗಳು, ಆಹಾರ ಸಾಮಗ್ರಿ ಮಾರಾಟಮಾಡುವ ಅಂಗಡಿಗಳು, ಮೆಡಿಕಲ್ ಶಾಪ್ ಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಹೊಟೇಲ್ ಗಳಲ್ಲಿ ಕುಳಿತು ಆಹಾರ ಸೇವಿಸಲು ಅವಕಾಶವಿಲ್ಲ. ಪಾರ್ಸೆಲ್ ಕೊಂಡುಹೋಗುವಂತೆ ಆದೇಶಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)