varthabharthi

ಕ್ರೀಡೆ

ಕೊರೋನ ವೈರಸ್‌ನಿಂದ ರಿಯಲ್ ಮ್ಯಾಡ್ರಿಡ್‌ನ ಮಾಜಿ ಅಧ್ಯಕ್ಷ ಲೊರೆಂಝೋ ನಿಧನ

ವಾರ್ತಾ ಭಾರತಿ : 22 Mar, 2020

ಮ್ಯಾಡ್ರಿಡ್, ಮಾ.22: ಕೊರೋನ ವೈರಸ್ ತಗಲಿ ಆಸ್ಪತ್ರೆಗೆ ದಾಖಲಾಗಿದ್ದ ರಿಯಲ್ ಮ್ಯಾಡ್ರಿಡ್‌ನ ಮಾಜಿ ಅಧ್ಯಕ್ಷ ಲೊರೆಂರೊ ಸ್ಯಾಂಝ್ ಶನಿವಾರ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಲೊರೆಂರೊ ನಿಧನದ ಸುದ್ದಿಯನ್ನು ಅವರ ಪುತ್ರ ದೃಢಪಡಿಸಿದ್ದಾರೆ.

ಲೊರೆಂರೊ ಅವರು 1995ರಿಂದ 2000ರ ತನಕ ಸ್ಪೇನ್‌ನ ದೈತ್ಯ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರ ಅವಧಿಯಲ್ಲಿ ಮ್ಯಾಡ್ರಿಡ್ ತಂಡ ಎರಡು ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಿತ್ತು.

‘‘ನನ್ನ ತಂದೆ ಇಂದು ನಿಧನರಾದರು. ಅವರ ಜೀವನ ಈ ರೀತಿ ಅಂತ್ಯವಾಗಬಾರದಿತ್ತು’’ ಎಂದು ಲೊರೆಂಝ್ ಅವರ ಪುತ್ರ ಟ್ವೀಟ್ ಮಾಡಿದ್ದಾರೆ.

ಸ್ಪೇನ್‌ನಲ್ಲಿ 1,320ಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ಕೊರೋನ ವೈರಸ್ ಸೋಂಕಿನ ಲಕ್ಷಣ ಕಂಡುಬಂದ ಕಾರಣ ತನ್ನ ತಂದೆಯನ್ನು ಮ್ಯಾಡ್ರಿಡ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು ಎಂದು ಮಾಜಿ ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರನಾಗಿರುವ ಸ್ಯಾಂಝ್ ಜೂನಿಯರ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)