varthabharthi

ಕ್ರೀಡೆ

ಕೆ.ಎಲ್.ರಾಹುಲ್‌ರಿಂದ ಸ್ಟೇ ಎಟ್ ಹೋಮ್ ಚಾಲೆಂಜ್

ವಾರ್ತಾ ಭಾರತಿ : 22 Mar, 2020

ಬೆಂಗಳೂರು, ಮಾ.22: ಭಾರತದ ಕ್ರಿಕೆಟಿಗ ಕೆ.ಎಲ್.ರಾಹುಲ್ ‘ಸ್ಟೇ ಎಟ್ ಹೋಮ್ ಚಾಲೆಂಜ್’ನ್ನು ಕೈಗೆತ್ತಿಕೊಂಡಿದ್ದು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿದ್ದಾರೆ.

ವಿಶ್ವದಾದ್ಯಂತವಿರುವ ಸೆಲೆಬ್ರಿಟಿಗಳು ವೀಡಿಯೊವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವುದರೊಂದಿಗೆ ಜನರಲ್ಲಿ ಕೊರೋನ ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕೊರೋನ ವೈರಸ್ ಭೀತಿಯಿಂದ ಮನೆಯೊಳಗೆ ಇರಬೇಕಾಗಿರುವ ಸಂದರ್ಭದಲ್ಲಿ ನೀವು ಏನನ್ನು ಇಷ್ಟಪಡುತ್ತೀರೊ ಅದನ್ನೇ ಮಾಡುವುದು ಚಾಲೆಂಜ್‌ನ ಪರಿಕಲ್ಪನೆ.

ರಾಹುಲ್ ಮನೆಯಲ್ಲಿರುವಾಗ ವಿಭಿನ್ನ ಅವತಾರದಲ್ಲಿರುವುದು ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿದೆ. ಕ್ರಿಕೆಟ್ ಚೆಂಡಿನೊಂದಿಗೆ ಆಡುವುದರಿಂದ ತೊಡಗಿ ಪುಸ್ತಕವನ್ನು ಓದುವ ತನಕ ಮನೆಯಲ್ಲಿರುವಾಗ ಸ್ವತಃ ಮನರಂಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಹುಲ್ ಜನರಲ್ಲಿ ವಿನಂತಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)