varthabharthi

ನಿಮ್ಮ ಅಂಕಣ

ಕೊರೋನ ವೈರಸ್: ಕಾರ್ಮಿಕರ ಬಗ್ಗೆ ಸರಕಾರ ಗಮನ ಹರಿಸಲಿ

ವಾರ್ತಾ ಭಾರತಿ : 23 Mar, 2020
- ಖಾದರ್ ಫರಂಗಿಪೇಟೆ, ಜಿಲ್ಲಾಧ್ಯಕ್ಷ, ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ದ.ಕ. ಜಿಲ್ಲೆ

ಮಾನ್ಯರೇ,

ಜಗತ್ತಿನಾದ್ಯಂತ ಹರಡಿರುವ ಸಾಂಕ್ರಾಮಿಕ ರೋಗ ಕೋವಿಡ್-19(ಕೊರೋನ) ನಿಂದ ಮುಂಜಾಗ್ರತಾ ಕ್ರಮಕ್ಕಾಗಿ ಜನರು ಆತಂಕಕ್ಕೊಳಗಾಗಿದ್ದು, ದೇಶದ ಕಾರ್ಮಿಕರ ಜನಜೀವನ ತತ್ತರಿಸಿ ಹೋಗಿದೆ. ದಿನ ನಿತ್ಯ ದುಡಿದು ಜೀವನ ನಿರ್ವಹಿಸುವ ಮಧ್ಯಮ ವರ್ಗದ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ. ಆಟೊ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ವಿವಿಧ ಮಾಲ್, ಅಂಗಡಿ, ಹೊಟೇಲ್‌ಗಳಲ್ಲಿ ಕೆಲಸ ನಿರ್ವಹಿಸುವವರು, ಶಾಲಾ ಕಾಲೇಜು, ಆಸ್ಪತ್ರೆ ಹಾಗೂ ವಿವಿಧ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ದಿನ ನಿತ್ಯ ದುಡಿದು ಜೀವನ ನಿರ್ವಹಿಸುವವರಾಗಿದ್ದಾರೆ.

ಕೊರೋನ ವೈರಾಣು ಹರಡುವುದನ್ನು ತಡೆಗಟ್ಟಲು ಮಧ್ಯಮ ವರ್ಗ ವೃತ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ ಸ್ಥಳಗಳು ಸ್ತಬ್ಧವಾಗಿದ್ದು, ಬಡ ಮಧ್ಯಮ ವರ್ಗ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಕೊರೋನ ವೈರಾಣು ಹರಡುವಿಕೆ ತಡೆಗಟ್ಟಲು ಸರಕಾರ ಸ್ವಯಂ ನಿರ್ಬಂಧಿಸಲು ಜನರಿಗೆ ಆದೇಶ ನೀಡುವುದರೊಂದಿಗೆ ದಿನನಿತ್ಯ ದುಡಿದು ಜೀವನ ಸಾಗಿಸುವ ಕಾರ್ಮಿಕರಿಗೆ ಆರ್ಥಿಕ ಸಹಾಯ ನೀಡಲು ಯೋಜನೆ ರೂಪಿಸಬೇಕಾಗಿದೆ. ಮಾತ್ರವಲ್ಲ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದ ಕಾರ್ಮಿಕರಿಗೆ ಬ್ಯಾಂಕ್ ನವರು ಮಾರ್ಚ್ ತಿಂಗಳಲ್ಲಿ ಸಾಲವನ್ನು ಮರಳಿ ಪಡೆಯುವ (ರಿಕವರಿ) ನೆಪವೊಡ್ಡಿ ಕಿರುಕುಳ ನೀಡುತ್ತಿರುವುದನ್ನು ಸರಕಾರ ನಿರ್ಬಂಧಿಸಿ ಮೂರು ತಿಂಗಳುಗಳ ಕಾಲ ಸಡಿಲಿಕೆ ಕೊಡಬೇಕು. ಮೈಕ್ರೋ ಫೈನಾನ್ಸ್ ಅಥವಾ ಸ್ತ್ರೀ ಶಕ್ತಿ ಗುಂಪುಗಳಿಂದ ಸಾಲ ಪಡೆದವರಿಗೂ ರಿಯಾಯಿತಿ ನೀಡಲು ಸರಕಾರ ಆದೇಶಿಸಬೇಕು. ದೀರ್ಘಕಾಲದ ಕಾಯಿಲೆ ಪೀಡಿತರಿಗೆ ಔಷಧ ಅಥವಾ ಚುಚ್ಚುಮದ್ದು ಅಗತ್ಯ ಇದ್ದಲ್ಲಿ ಅದರ ವೆಚ್ಚವನ್ನು ಸರಕಾರವೇ ಭರಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)