varthabharthi


ಗಲ್ಫ್ ಸುದ್ದಿ

ಸೌದಿಯಾದ್ಯಂತ ಇಂದಿನಿಂದ 21 ದಿನಗಳ ತನಕ ಕರ್ಫ್ಯೂ

ವಾರ್ತಾ ಭಾರತಿ : 23 Mar, 2020

ರಿಯಾದ್, ಮಾ. 23: ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್ ಸೊಂಕು ತಡೆಗಟ್ಟಲು ಸೌದಿ ಅರೇಬಿಯಾದಾದ್ಯಂತ ಕರ್ಫ್ಯೂ ವಿಧಿಸಿ ಸೌದಿ ದೊರೆ ಸಲ್ಮಾನ್ ರವಿವಾರ ಆದೇಶ ಹೊರಡಿಸಿದ್ದಾರೆ.

ಮಾರ್ಚ್ 23ರಂದು ರಾತ್ರಿ 7 ಗಂಟೆಯಿಂದ ಕರ್ಫ್ಯೂ ಆರಂಭಗೊಳ್ಳಲಿದೆ. ಮುಂದಿನ 21 ದಿನಗಳ ಕಾಲ ಪ್ರತಿದಿನ ಸಂಜೆ 7 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.

ರವಿವಾರ ಸೌದಿಯಲ್ಲಿ 119 ಕೊರೋನ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಈಗ 511ಕ್ಕೇರಿದೆ.
ಆಹಾರ, ಆರೋಗ್ಯ, ಮಾಧ್ಯಮ, ಸರಕು ಸಾಗಣೆ ವಾಹನಗಳು, ಇ-ಕಾಮರ್ಸ್, ಹೋಟೆಲ್‌ಗಳು, ಫರ್ನಿಶ್ಡ್ ಅಪಾರ್ಟ್‌ಮೆಂಟ್‌ಗಳು, ಇಂಧನ ಕ್ಷೇತ್ರ, ವಿತ್ತೀಯ ಕ್ಷೇತ್ರ, ಟೆಲಿಕಾಂ ಹಾಗೂ ಜಲಪೂರೈಕೆ ವ್ಯವಸ್ಥೆಗೆ ಈ ಕರ್ಫ್ಯೂವಿನಿಂದ ವಿನಾಯಿತಿ ನೀಡಲಾಗಿದೆ.

ಕರ್ಫ್ಯೂ ಅವಧಿಯ ವೇಳೆ ರಸ್ತೆಗಳಲ್ಲಿ ಸುರಕ್ಷಾ ಪಡೆಗಳು, ಆ್ಯಂಬುಲೆನ್ಸುಗಳು, ಸರಕಾರಿ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಮಸೀದಿಯಲ್ಲಿ ಪ್ರಾರ್ಥನೆ ಕರೆ ನೀಡಲು ಧಾರ್ಮಿಕ ಗುರುಗಳಿಗೆ ಮಸೀದಿಗಳಿಗೆ ತೆರಳಲು ಅನುಮತಿಯಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)