varthabharthi

ಬೆಂಗಳೂರು

ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶಿಸಿದ್ದ ಆರ್ದ್ರಾ ಬೆಂಬಲಿಸಿ ಗೋಡೆ ಬರಹ

ವಾರ್ತಾ ಭಾರತಿ : 23 Mar, 2020

ಆರ್ದ್ರಾ

ಬೆಂಗಳೂರು, ಮಾ.23: ಫ್ರೀ ಕಾಶ್ಮೀರ ಭಿತ್ತಿ ಪತ್ರ ಹಿಡಿದ ಕಾರಣಕ್ಕೆ ಬಂಧನಕ್ಕೆ ಒಳಗಾಗಿರುವ ಆರ್ದ್ರಾ ಪರ ಘೋಷಣೆಯ ಗೋಡೆ ಬರಹವೊಂದು ನಗರದಲ್ಲಿ ಪತ್ತೆಯಾಗಿದೆ.

ನಗರದ ಹೆಬ್ಬಾಳದ ಸಿಬಿಐ ಕಚೇರಿ ಬಳಿ ಇರುವ ಕೆಳ ಸೇತುವೆ ಬಳಿ ಆರ್ದ್ರಾ ಅನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಬರೆಯಲಾಗಿದೆ ಎನ್ನಲಾಗಿದೆ.

ರವಿವಾರ ಕೆಲ ಮಂದಿ ಗೋಡೆ ಮೇಲೆ ಬರೆದು ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಬರಹವನ್ನ ಅಳಿಸಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)