varthabharthi

ರಾಷ್ಟ್ರೀಯ

ಭಾರತದಲ್ಲಿ ಮಧ್ಯರಾತ್ರಿಯಿಂದ ಎಲ್ಲ ವಿಮಾನಗಳ ಓಡಾಟ ಸ್ಥಗಿತ

ವಾರ್ತಾ ಭಾರತಿ : 24 Mar, 2020

ಹೊಸದಿಲ್ಲಿ, ಮಾ.24: ಭಾರತದಲ್ಲಿ ಕೊರೋನ ವೈರಸ್ ಸೋಂಕು ಪೀಡಿತರ ಸಂಖ್ಯೆ 492ಕ್ಕೆ ಏರಿದೆ. ಈ ವರೆಗೆ 9 ಮಂದಿ ಬಲಿಯಾಗಿದ್ದಾರೆ.

ಕೊರೋನ ವೈರಸ್ ಪೀಡಿತರ  ಸಂಖ್ಯೆ ಇನ್ನಷ್ಟು ಜಾಸ್ತಿಯಾಗಬಹುದು ಎಂದು ಆರೋಗ್ಯ ತಜ್ಞರು ಎಂದು ಎಚ್ಚರಿಸಿದ್ದಾರೆ, ಕೊರೋನ ವೈರಸ್ ಹರಡುವುದನ್ನು ತಡೆಯಲು ಭಾರತವು ಇಂದು ಮಧ್ಯರಾತ್ರಿಯಿಂದ ದೇಶೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿವೆ.

ಮಾರ್ಚ್ 24 ರಂದು ರಾತ್ರಿ 11:59 ರಿಂದ  ಮಾರ್ಚ್ 31 ರ ಮಧ್ಯರಾತ್ರಿಯವರೆಗೆ ಯಾವುದೇ ದೇಶೀಯ ವಾಣಿಜ್ಯ ವಿಮಾನಯಾನ ಸಂಸ್ಥೆಗಳ ವಿಮಾನಗಳ ಓಡಾಟ ಇಲ್ಲ   ಎಂದು ನಾಗರಿಕ ವಿಮಾನಯಾನ ಸಚಿವಾಲಯ ಘೋಷಿಸಿದೆ. ಆದಾಗ್ಯೂ, ಸರಕುಗಳನ್ನು ಸಾಗಿಸುವ ವಿಮಾನಗಳಿಗೆ ನಿರ್ಬಂಧಗಳು ಅನ್ವಯಿಸುವುದಿಲ್ಲ.

ಭಾರತದ ಹಲವಾರು ವಿಮಾನಯಾನ ಸಂಸ್ಥೆಗಳು ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ  ತಮ್ಮ ಅಂತರ್ ರಾಷ್ಟ್ರೀಯ ವಿಮಾನಗಳ  ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದವು. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ಹಲವಾರು ದೇಶಗಳು  ಪ್ರಯಾಣ ನಿರ್ಬಂಧಗಳನ್ನು ಜಾರಿಗೆ ತಂದಿವೆ.

ಭಾರತದಲ್ಲಿ  ಇತ್ತೀಚಿನ ಎರಡು ಸಾವು ಪ್ರಕರಣಗಳಲ್ಲಿ 54 ವರ್ಷದ ಒಬ್ಬ ವ್ಯಕ್ತಿಯು ವಿದೇಶಿ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ, ಇದು ವೈರಸ್  ಸಮುದಾಯ ಪ್ರಸರಣದ ಪ್ರಾರಂಭವನ್ನು ಸೂಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳು 101 ಕ್ಕೆ ತಲುಪಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)