ಕೊರೋನ ವೈರಸ್ ಸೋಂಕು : ಮುಂಬೈಯಲ್ಲಿ 65ರ ಹರೆಯದ ಮಹಿಳೆಯೊಬ್ಬರ ಸಾವು
ಮುಂಬೈ, ಮಾ.24: ಕೊರೋನ ವೈರಸ್ ಪೀಡಿತ 65ರ ಹರೆಯದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಕೋವಿಡ್-19 ಕಾರಣದಿಂದಾಗಿ ಮುಂಬೈ ಮಹಾನಗರದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದ್ದು, ಭಾರತದಲ್ಲಿ ಈ ತನಕ 10 ಮಂದಿ ಸಾವನ್ನಪ್ಪಿದ್ದಾರೆ.
ಮುಂಬೈನಲ್ಲಿ ಮೃತಪಟ್ಟ ಮಹಿಳೆ ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಅಹ್ಮದಾಬಾದ್ಗೆ ಮರಳಿದ್ದರು.
ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಎದುರಿಸುತ್ತಿದ್ದರು. ಈ ಮೊದಲು ಅಧಿಕ ರಕ್ತದೊತ್ತಡ ಮತ್ತು ತೀವ್ರ ಮಧುಮೇಹ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು.
Next Story