ಸುಳ್ಯ ವಿಖಾಯ ತಂಡದಿಂದ ಮಾಸ್ಕ್ ತಯಾರಿ
ಸುಳ್ಯದ ತುರ್ತು ಸೇವಾ ತಂಡವಾದ ವಿಖಾಯ ಸಮಿತಿಯು ಮರುಬಳಕೆ ಮಾಡುವಂತಹ ಬಟ್ಟೆಯ ಮಾಸ್ಕ್ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಮನೆಯಲ್ಲೇ ಇರಿ ಎಂಬ ಸರಕಾರದ ಆದೇಶದನ್ವಯ ಸುಳ್ಯದ ಬಹುತೇಕ ವಿಖಾಯ ಕಾರ್ಯಕರ್ತರು ಮಾಸ್ಕ್ ತಯಾರಿಯಲ್ಲಿ ತೊಡಗಿಸಿಕ್ಕೊಂಡಿದ್ದಾರೆ.
ಮಾಸ್ಕ್ ಗಳನ್ನು ಜಿಲ್ಲಾ ವಿಖಾಯ ಸಮಿತಿಯ ಸೂಚನೆಯಂತೆ ಸಾರ್ವಜನಿಕರಿಗೆ ವಿತರಿಸಲಿದ್ದೇವೆ ಎಂದು ಸುಳ್ಯ ವಿಖಾಯ ಸಮಿತಿಯ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ತಿಳಿಸಿದ್ದಾರೆ.
Next Story