varthabharthi

ರಾಷ್ಟ್ರೀಯ

ಕಾಬೂಲ್ ನ ಗುರುದ್ವಾರದಲ್ಲಿ ಗುಂಡಿನ ದಾಳಿ: ನಾಲ್ಕು ಸಾವು

ವಾರ್ತಾ ಭಾರತಿ : 25 Mar, 2020

 ಕಾಬೂಲ್ , ಮಾ.25: ಅಫ್ಘಾನಿಸ್ತಾನದ  ಕಾಬೂಲ್ ನಲ್ಲಿ ಅಲ್ಪಸಂಖ್ಯಾತ ಸಿಖ್ಖರ ಧಾರ್ಮಿಕ ಕೇಂದ್ರವಾಗಿರುವ ಗುರುದ್ವಾರದಲ್ಲಿ ದುಷ್ಕರ್ಮಿಯೊಬ್ಬನು ಬುಧವಾರ ಬೆಳಗ್ಗೆ  ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿಯಲ್ಲಿರುವ ಗುರುದ್ವಾರಕ್ಕೆ ಪ್ರವೇಶಿಸಿದ ಬಂಧೂಕುದಾರಿ ಮನಬಂದಂತೆ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ದಾಳಿಯ ಜವಾಬ್ದಾರಿಯನ್ನು ಯಾರೂ ವಹಿಸಿಕೊಂಡಿಲ್ಲ ದು ಅಧಿಕೃತ  ಮೂಲಗಳು ತಿಳಿಸಿವೆ. ಆದರೆ ಈ ತಿಂಗಳ ಆರಂಭದಲ್ಲಿ ಐಸಿಸ್  ಉಗ್ರರು ದಾಳಿಯಿಂದಾಗಿ ಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದ 32 ಮಂದಿ ಮೃತಪಟ್ಟಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)