varthabharthi

ಕರ್ನಾಟಕ

ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಬಿ.ಎಸ್. ಡಿಗ್ಗಿ

ವಾರ್ತಾ ಭಾರತಿ : 25 Mar, 2020

ದೇವರಹಿಪ್ಪರಗಿ (ವಿಜಯಪುರ): ಸಮೀಪದ ಹಿಟ್ಟನಹಳ್ಳಿ ತಾಂಡದಲ್ಲಿ ದೇವರಹಿಪ್ಪರಗಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಕೊರೋನ ವೈರಸ್ ವಿರುದ್ಧ ಜಾಗೃತಿ ಮೂಡಿಸಲಾಯಿತು.

ಈ ವೇಳೆ ತಾಲೂಕು ಹಿರಿಯ ಆರೋಗ್ಯ ಸಹಾಯಕರಾದ ಬಿ.ಎಸ್.ಡಿಗ್ಗಿ ಮಾತನಾಡಿ, ಪರಸ್ಪರ ಅಂತರ ಇಟ್ಟುಕೊಂಡು ದೈನಂದಿನ ಚಟುವಟಿಕೆ ಕೈಗೊಳ್ಳಬೇಕು. ರೋಗದ ಲಕ್ಷಣಗಳು ಕಂಡುಬಂದರೆ ಸಾಮಾಜಿಕ ಅಂತರ ಕಾಪಾಡಬೇಕು ಎಂದರು.

ದೇವರಹಿಪ್ಪರಗಿ ನೋಡಲ್ ಅಧಿಕಾರಿಗಳಾದ ಇ ಧಾರವಾಡಕರ್ ಮಾತನಾಡಿ, ಪದೇ ಪದೇ ಕೈಗಳನ್ನು ತೊಳೆಯುವುದು ಆರೋಗ್ಯದ ದೃಷ್ಟಿಯಿಂದ ಮಹತ್ವವಾಗಿದೆ ಎಂದರು. ಈ ವೇಳೆ ಹಿಟ್ಟಿನಹಳ್ಳಿ ತಾಂಡಾದ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.

ಈ ವೇಳೆ ಪುಣೆಯಿಂದ ಬಂದ ಗ್ರಾಮಸ್ಥರನ್ನು ಗುರುತಿಸಿ ಆರೋಗ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)