varthabharthi

ಅಂತಾರಾಷ್ಟ್ರೀಯ

ಬಾಂಗ್ಲಾದ ಮಾಜಿ ಪ್ರಧಾನಿ ಖಾಲಿದಾ ಝಿಯಾ ಜೈಲಿನಿಂದ ಬಿಡುಗಡೆ

ವಾರ್ತಾ ಭಾರತಿ : 25 Mar, 2020

ಢಾಕಾ, ಮಾ.25:  ಭ್ರಷ್ಟಾಚಾರ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶದ ರಾಷ್ಟ್ರೀಯವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷೆ ಖಲೀದಾ ಝಿಯಾ ಅವರ ವಯಸ್ಸನ್ನು ಪರಿಗಣಿಸಿ ಮಾನವೀಯ ಆಧಾರದ ಮೇಲೆ ಸರಕಾರ ಬಿಡುಗಡೆಗೊಳಿಸಿದೆ.

75 ವರ್ಷದ ಬಿಎನ್‌ಪಿ ಮುಖ್ಯಸ್ಥರನ್ನು ಬಂಗಬಂಧು ಶೇಖ್ ಮುಜೀಬ್ ವೈದ್ಯಕೀಯ ವಿಶ್ವವಿದ್ಯಾಲಯದಿಂದ (ಬಿಎಸ್‌ಎಂಎಂಯು) ಬುಧವಾರ ಮುಕ್ತಗೊಳಿಸಲಾಯಿತು.

ಸಂಜೆ 4.14 ರ ಸುಮಾರಿಗೆ ಖಲೀದಾ ಝಿಯಾ ತನ್ನ ಕುಟುಂಬ ಸದಸ್ಯರೊಂದಿಗೆ ಬಿಎಸ್‌ಎಂಎಂಯುನಿಂದ ಹೊರಬಂದರು..

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)