varthabharthi

ಕರಾವಳಿ

ವೈದ್ಯಕೀಯ ಪರೀಕ್ಷಾ ಫಲಿತಾಂಶ

ಕಾಸರಗೋಡು : ಇಂದು ಕೊರೋನ ವೈರಸ್ ಸೋಂಕು ಪತ್ತೆಯಾಗಿಲ್ಲ

ವಾರ್ತಾ ಭಾರತಿ : 25 Mar, 2020

ಸಾಂದರ್ಭಿಕ ಚಿತ್ರ

ಕಾಸರಗೋಡು : ಕೊರೋನ ವೈರಸ್ ನಿಂದ ನೆಮ್ಮದಿಯ ವರದಿ ಇಂದು ಬಂದಿದ್ದು, ಇಂದು ಬಂದ ವೈದ್ಯಕೀಯ ಪರೀಕ್ಷೆಯಲ್ಲಿ ಕಾಸರಗೋಡಿನಲ್ಲಿ ಸೋಂಕು ಕಂಡು ಬಂದಿಲ್ಲ.

ಇದರಿಂದ ಕಳೆದ ಕೆಲ ದಿನಗಳಿಂದ ಏರುತ್ತಲೇ ಇದ್ದ ಸೋಂಕಿತರ ಸಂಖ್ಯೆಗೆ ತಡೆಯಾದಂತಾಗಿದೆ. ಇಂದು ಕೇರಳದಲ್ಲಿ ಒಟ್ಟು 9 ಪ್ರಕರಣಗಳು ದೃಢಪಟ್ಟಿದ್ದು, ಪಾಲಕ್ಕಾಡ್ ನಲ್ಲಿ 2, ಎರ್ನಾಕುಲಂ 3, ಇಡುಕ್ಕಿ 1 , ಪತ್ತನಂತ್ತಿಟ್ಟದಲ್ಲಿ 2, ಕೋಝಿಕ್ಕೋಡ್ ಒಂದು ಪ್ರಕರಣ ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 112ಕ್ಕೆ ತಲಪಿದೆ.

ನಾಲ್ವರು ದುಬೈ, ಓರ್ವ ಅಮೆರಿಕ, ಓರ್ವ ಫ್ರಾನ್ಸ್ ನಿಂದ ಬಂದವರಾಗಿದ್ದು, ಮೂವರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗಲಿದೆ. ಕಾಸರಗೋಡಿನಲ್ಲಿ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 42 ರಷ್ಟು ಸೋಂಕಿತರು ಪತ್ತೆಯಾಗಿದ್ದರು. ಇದರಿಂದ ಜನತೆಯಲ್ಲಿ ಭಯದ ವಾತಾವರಣ ಉಂಟಾಗಿತ್ತು.

ಜಿಲ್ಲೆಯಲ್ಲಿ 3794 ಮಂದಿ ನಿಗಾದಲ್ಲಿದ್ದಾರೆ. 94 ಮಂದಿ ಐಸೋಲೇಷನ್ ನಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)