varthabharthiರಾಷ್ಟ್ರೀಯ

ಕೋವಿಡ್ -19: ಕಾಶ್ಮೀರದಲ್ಲಿ ಮೊದಲ ಬಲಿ

ವಾರ್ತಾ ಭಾರತಿ : 26 Mar, 2020

ಶ್ರೀನಗರ, ಮಾ.26: ಜಮ್ಮು ಮತ್ತು ಕಾಶ್ಮೀರದಲ್ಲಿ  ಕೊರೋನ ವೈರಸ್ ಸೋಂಕಿತ   65ರ ಹರೆಯದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಕಾಶ್ಮೀರದಲ್ಲಿ ಮೊದಲ ಪ್ರಕರಣ ದಾಖಲಾಗಿವೆ.

ಶ್ರೀನಗರದ ಸರ್ಕಾರಿ ಎದೆ ರೋಗ ಆಸ್ಪತ್ರೆಯಲ್ಲಿ ಹೈದರ್‌ಪೋರಾ ಗ್ರಾಮದ 65 ವರ್ಷದ ವ್ಯಕ್ತಿಯೊಬ್ಬರು ಮೂರು ದಿನಗಳ ಹಿಂದೆ ನಿಧನರಾಗಿದ್ದರು. ಅವರು ಕೊರೋನ ವೈರಸ್ ಸೋಂಕಿಗೆ ಬಲಿಯಾಗಿರುವುದನ್ನು ಇಂದು ದೃಢಪಡಿಸಲಾಗಿದೆ. ಈ  ಹಿಂದೆ ಪರೀಕ್ಷಿಸಿದಾಗ ಪೊಸಿಟಿವ್ ಅವರಲ್ಲಿ  ಪತ್ತೆಯಾಗಿತ್ತು.

ಸಾವನ್ನಪ್ಪಿದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಇತರ ನಾಲ್ವರನ್ನು ಸಹ ಬುಧವಾರ ಪೊಸಿಟಿವ್ ಪರೀಕ್ಷೆಗೆ ಒಳಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್ -19  ಪ್ರಕರಣಗಳ ಸಂಖ್ಯೆ ಈಗ 11 ಆಗಿದೆ.

ಗಮನಾರ್ಹ ಸಂಖ್ಯೆಯ ಜನರು ತಮ್ಮ ಪ್ರಯಾಣದ ಇತಿಹಾಸವನ್ನು ಮರೆಮಾಚಿರುವ ಹಿನ್ನೆಲೆಯಲ್ಲಿ ಜಮ್ಮು- ಕಾಶ್ಮೀರದಲ್ಲಿ ಈಗ ವರದಿಯಾಗಿರುವುದಕ್ಕಿಂತ ಹೆಚ್ಚು ಪ್ರಕರಣಗಳು  ದಾಖಲಾಗಬಹುದೆಂದು ಅಧಿಕಾರಿಗಳು  ಆತಂಕ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)