varthabharthi


ಅಂತಾರಾಷ್ಟ್ರೀಯ

ಆಫ್ರಿಕಾದ ಮಾಜಿ ಫುಟ್ಬಾಲ್ ಆಟಗಾರ ಅಬ್ದುಲ್ ಖಾದಿರ್ ಕೊರೋನದಿಂದ ಸಾವು

ವಾರ್ತಾ ಭಾರತಿ : 26 Mar, 2020

ಲಂಡನ್  , ಮಾ.26: ಸೊಮಾಲಿಯಾದ  ದಂತಕಥೆ ಅಬ್ದುಲ್ ಖಾದಿರ್  ಮುಹಮ್ಮದ್ ಫರ್ಹಾಹ್  ಕೊರೋನ ವೈರಸ್ ಸೋಂಕಿನಿಂದಾಗಿ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಕಳೆದ ವಾರ  ಅವರನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಮಾರಣಾಂತಿಕ ಕೊರೋನ ವೈರಸ್ ಸೋಂಕು ಬಾಧಿಸಿರುವುದು ದೃಢಪಟ್ಟಿತ್ತು.  ವಾಯುವ್ಯ ಲಂಡನ್ ಆಸ್ಪತ್ರೆಯಲ್ಲಿ ಅವರು  ಚಿಕಿತ್ಸೆ ಪಡೆಯುತ್ತಿದ್ದರು.   ಆದರೆ ಚಿಕಿತ್ಸೆ ಫಲಕಾರಿಯಾಗದೆ  ಮಂಗಳವಾರ ನಿಧನರಾದರು.

59ರ ಹರೆಯದ ಅಬ್ದುಲ್ ಖಾದಿರ್  ಫರಾಹ್ ಸೊಮಾಲಿಯಾದಲ್ಲಿ ಯುವಜನ  ಮತ್ತು ಕ್ರೀಡಾ ಸಚಿವರ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಫರಾಹ್ ಫೆಬ್ರವರಿ 15, 1961 ರಂದು ರಾಜಧಾನಿ ಮೊಗಾಡಿಶುದಿಂದ ಉತ್ತರಕ್ಕೆ ಸುಮಾರು 342 ಕಿಲೋಮೀಟರ್ ದೂರದಲ್ಲಿರುವ ಬೆಲ್ಡ್ವೆನ್ ನಗರದಲ್ಲಿ ಜನಿಸಿದರು. ಅವರ ಫುಟ್ಬಾಲ್ ವೃತ್ತಿಜೀವನವು 1976 ರಲ್ಲಿ  ಆರಂಭಗೊಂಡಿತ್ತು. ರಾಷ್ಟ್ರೀಯ ಶಾಲೆಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಅವರು ಕಾಣಿಸಿಕೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)