varthabharthi


ನಿಮ್ಮ ಅಂಕಣ

ಕೊರೋನಗಳ ಸೃಷ್ಟಿಗೆ ಕಾರ್ಪೊರೇಟ್ ಫಾರ್ಮಿಂಗ್ ಹಾಗೂ MNCಗಳೇ ಕಾರಣ

ವಾರ್ತಾ ಭಾರತಿ : 26 Mar, 2020
ಶಿವಸುಂದರ್

ಇಂದು ನಾವು  ಎದುರಿಸುತ್ತಿರುವ ಕೊರೋನ ಮಹಾಮಾರಿ ಹುಟ್ಟಿದ್ದು ಹೇಗೆ ಮತ್ತು ಎಲ್ಲಿ ಎಂಬುದರ ಮೂಲವನ್ನು ಅರ್ಥಮಾಡಿಕೊಳ್ಳದೆ ನಾವು  ಈ ಯುದ್ಧದಲ್ಲಿ ಗೆಲ್ಲಲಾಗುವುದಿಲ್ಲ.

ಸಾಮಾನ್ಯವಾಗಿ ತುರ್ತು ಅಪಾಯದ ಪರಿಸ್ಥಿತಿಗಳಲ್ಲಿ ಸರ್ಕಾರ ಮತ್ತು ಸಮಾಜ ತತ್ ಕ್ಷಣದ ಅಪಾಯದಿಂದ ಪಾರಾಗುವುದುನ್ನು ಮಾತ್ರ ಗುರಿಯಾಗಿರಿಸಿಕೊಂಡಿರುತ್ತದೆ. ಸಾಮಾನ್ಯ ಜನರ ಮಟ್ಟಿಗೆ ಅದು ಸಹಜ. ಆದರೆ  ಸರ್ಕಾರಗಳು ತುರ್ತು ಅಪಾಯದಿಂದ ಪಾರಾಗುವಷ್ಟೇ ಮುಖ್ಯವಾಗಿ ಇಂಥಾ ಸಾಂಕ್ರಾಮಿಕಗಳ ಮೂಲ ಕಾರಣಗಳನ್ನು ಪತ್ತೆ ಹಚ್ಚಿ ಮತ್ತೆ  ಮರುಕಳಿಸದಂತೆ ತಡೆಗಟ್ಟಲು ಬೇಕಾದ ಮೂಲಭೂತ ಹಾಗು ಸಾಂಸ್ಥಿಕ ಮತ್ತು  ದೂರಗಾಮಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಆದರೆ ಇಂದು ನಾವು ಎದುರಿಸುತ್ತಿರುವ ಚೀನಾ ಮೂಲದ ಕೋವಿಡ್-19 ಸೃಷ್ಟಿಸಿರುವ ಅವಘಡಗಳನ್ನೇ ಈ  ಹಿಂದೆ ಇದೆ ಗುಂಪಿಗೆ ಸೇರಿದ ಸಾರ್ಸ್, H5N2,  H5Nx, ಪಶ್ಚಿಮ ಆಫ್ರಿಕಾದ ಎಬೋಲಾ, ಬ್ರೆಝಿಲ್ ಮೂಲದ ಜೈಕಾ ಹಾಗು ಉತ್ತರ ಅಮೆರಿಕ ಮೂಲದ H1N1  ಮತ್ತು H5N2 ಎಂದು ಗುರುತಿಸಲಾದ ವೈರಸ್ ಗಳೂ ಸಹ ಸೃಷ್ಟಿಸಿದ್ದವು.

ಈಗಿನಂತೆ ಆಗಲು ಸಹ ಸರ್ಕಾರ ಗಳು ತುರ್ತು ಅಪಾಯದಿಂದ ಪಾರಾಗಲು ಮಾತ್ರ ಒತ್ತುಕೊಟ್ಟಿದ್ದವು. ಆ ಕಾರಣದಿಂದಾಗಿಯೇ ಜಗತ್ತು ಈಗ ಈ ನವಕೊರೋನದ ಮಹಾಮಾರಿಯನ್ನು ಎದುರಿಸಬೇಕಾಗಿ ಬಂದಿದೆ...

ಆದರೂ, ಇಂಥಾ ವೈರಾಣುಗಳ ಸಾಂಕ್ರಾಮಿಕತೆಗೆ ಮೂಲ ಕಾರಣವೇನೆಂದು ಜಗತ್ತಿನಾದ್ಯಂತ ಹಲವಾರು ಸಂಶೋಧಕರು  ಆಳವಾಗಿ ಅಧ್ಯಯನ ಮಾಡುತ್ತಿದ್ದಾರೆ.  ಅವರಲ್ಲಿ ಮುಂಚೂಣಿಯಲ್ಲಿರುವವರು ರಾಬ್ ವಾಲೇಸ್ ಎಂಬ ವಿಜ್ಞಾನಿ. 

ಅವರು 2016ರಲ್ಲಿ ಪ್ರಕಟಿಸಿದ BIG FARMS MAKE BIG FLUE ಎಂಬ ಪುಸ್ತಕ ಈ ಬಗ್ಗೆ ಅತ್ಯಂತ ಕೀಲಕವಾದ ಅಂಶಗಳನ್ನು ಬೆಳಕಿಗೆ ತರುತ್ತದೆ. ಈ  ಅಧ್ಯಯನದ ಪ್ರಕಾರ ಈ ಬಗೆಯ ರೋಗ ಸೃಷ್ಟಿಸುವ ಹೊಸ pathogen (ರೋಗಕಾರಕ ವೈರಸ್ ಮತ್ತು ಬ್ಯಾಕ್ಟೀರಿಯಾ)ಗಳು  ಹುಟ್ಟಿಕೊಳ್ಳಲು ಪ್ರಧಾನ ಕಾರಣವೇನೆಂದರೆ:-

ಜಗತ್ತಿನಾದ್ಯಂತ ಸಹಸ್ರಮಾನಗಳಿಂದ ಚಾಲ್ತಿಯಲ್ಲಿದ್ದ ಸ್ಥಳೀಯ ವಾಯುಮಾನ ಹಾಗು ಪರಿಸರ ಆಧರಿಸಿದ ಕೃಷಿ ಯನ್ನು ಹಾಗು ಸ್ಥಳೀಯ ಪರಿಸರ ಜನ್ಯ ಕಾಡುಗಳನ್ನು ನಾಶಮಾಡಿರುವ  ಬೃಹತ್ ಕೃಷಿ ಬಹುರಾಷ್ತ್ರೀಯ ಕಂಪನಿಗಳು. ಈ ಬೃಹತ್ MNC ಗಳು ಅಲ್ಲೆಲ್ಲ ದೊಡ್ಡಮಟ್ಟದಲ್ಲಿ ಏಕಸ್ವರೂಪಿ ಹಾಗು ತಳಿಸಂಸ್ಕರಿತ ಕಾರ್ಪೊರೇಟ್ (ಧಾನ್ಯ ಹಾಗು ಮಾಂಸ )  ಕೃಷಿಯನ್ನು ವಿಸ್ತರಿಸುತ್ತಿವೆ.  ಆ ಮೂಲಕ ಹೊಸ  ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಹುಟ್ಟಲು, ಉಳಿಯಲು ಮತ್ತು ವಿಪುಲವಾಗಿ ಬೆಳೆಯಲು  ಬೇಕಾದ ಏಕರೂಪಿ ಆಶ್ರಯದಾಯಿ (host) ವಾತಾವರಣವನ್ನು ಈ ಹೊಸ Agribusiness ಒದಗಿಸಿಕೊಟ್ಟಿದೆ. 

ಹಾಗು ಜಾಗತೀಕರಣದ ಸಂದರ್ಭದಲ್ಲಿ ಆಹಾರಾಭ್ಯಾಸಗಳು ಸಹ ಏಕರೂಪಿಯಾಗುತ್ತಾ ಇಂಥಾ MNC ಗಳ  ಆಹಾರ ಸರಕುಗಳನ್ನೇ  ಆಧರಿಸಿವೆ. ಹೀಗಾಗಿ ಎಲ್ಲೋ ಮೂಲೆಯಲ್ಲಿ ಹುಟ್ಟಿದ ವೈರಾಣುಗಳು ಬಹುಬೇಗನೆ ಜಗ್ಗತ್ತಿನಾದ್ಯಂತ ಹರಡುತ್ತಿವೆ. 

ಆದರೆ ಯಾವುದೇ ಸರ್ಕಾರಗಳು ಕೋವಿಡ್ -19 ನಂಥ ಸಾಂಕ್ರಾಮಿಕಗಳ ಮೂಲಕಾರಣವನ್ನು ಜಾಗತಿಕ Agribusiness  ಎಂಬ ಬಂಡವಾಳಶಾಹಿ ಸಾಂಕ್ರಾಮಿಕದಲ್ಲಿ ಹುಡುಕಲು ಸಿದ್ಧವಿಲ್ಲ. ಏಕೆಂದರೆ ಕಾರ್ಗಿಲ್ ಅಥವಾ ಸಿಂಜೆಂಟಾ ಎಂಬ ಕೆಲವೇ ಕೆಲವು ಬೃಹತ್ MNC  ಗಳ ವಾರ್ಷಿಕ ವಹಿವಾಟು ಜಗತ್ತಿನ 50 ದೇಶಗಳ ಜಿಡಿಪಿಗೂ ಹೆಚ್ಚು! ಅವರ ಮುಲಾಜಿನಲ್ಲಿರುವ  ಸರ್ಕಾರಗಳಿಂದ (ಮೋದಿ, ಟ್ರಂಪ...)ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? 

ಆದ್ದರಿಂದಲೇ ಇಂಥಾ ಸಾಂಕ್ರಾಮಿಕ ಗಳು ಆವರಿಸಿದಾಗ ಅದನ್ನು ಶಮನಮಾಡುವ ವ್ಯಾಕ್ಸಿನ್ ಹುಡುಕುವುದಕ್ಕೆ ಮಾತ್ರವೇ ಜಾಗತಿಕ "ಸಂಶೋಧನೆಗಳು" ಸೀಮಿತವಾಗುತ್ತವೆ. ಇಂಥಾ ವೈರಾಣು  ಮರುಕಳಿಸದಂತೆ ಮಾಡಬೇಕಾದುದೇನು ಎಂಬ ಪ್ರಶ್ನೆಯನ್ನೇ ಈ MNC ಪ್ರಾಯೋಜಿತ "ಸಂಶೋಧನೆ"ಗಳು ಹಾಕಿಕೊಳ್ಳುವುದಿಲ್ಲ. 

ಇತ್ತೀಚಿನ ಸಂದರ್ಶನವೊಂದರಲ್ಲಿ  ರಾಬ್ ವಾಲೇಸ್ ಅವರು  ಸಹ ಇದೆ ಅಭಿಪ್ರಾಯವನ್ನು ಹೀಗೆ ದಾಖಲಿಸುತ್ತಾರೆ: 
"The real danger of each new outbreak is the failure –or better put—the expedient refusal to grasp that each new Covid-19 is no isolated incident. The increased occurrence of viruses is closely linked to food production and the profitability of multinational corporations. Anyone who aims to understand why viruses are becoming more dangerous must investigate the industrial model of agriculture and, more specifically, livestock production. At present, few governments, and few scientists, are prepared to do so. Quite the contrary.
When the new outbreaks spring up, governments, the media, and even most of the medical establishment are so focused on each separate emergency that they dismiss the structural causes that are driving multiple marginalized pathogens into sudden global celebrity, one after the other"

ಕೆಳಗೆ ಕೋವಿಡ್-19ರ ಹಾವಳಿಯ ಕುರಿತು ರಾಬ್ ವಾಲೇಸ್ ಅವರ ಜೊತೆ ನಡೆಸಲಾದ ಸಂದರ್ಶನದ ಲಿಂಕ್ ಕೊಟ್ಟಿದ್ದೇನೆ. 

ಬಿಡುವಿದ್ದವರು ದಯವಿಟ್ಟು ಗಮನಿಸಿ.

https://climateandcapitalism.com/2020/03/11/capitalist-agriculture-and-covid-19-a-deadly-combination/

ರಾಬ್ ವಾಲೇಸ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)