varthabharthi

ರಾಷ್ಟ್ರೀಯ

ಭಾರತ ಲಾಕ್ ಡೌನ್

ಹಾಲು ತರಲು ಹೋದಾಗ ಪೊಲೀಸರು ಥಳಿಸಿದ ಪರಿಣಾಮ ವ್ಯಕ್ತಿ ಸಾವು: ಆರೋಪ

ವಾರ್ತಾ ಭಾರತಿ : 26 Mar, 2020

ಕೊಲ್ಕತ್ತಾ: ಬುಧವಾರ ಲಾಕ್ ಡೌನ್ ವೇಳೆ ಹಾಲು ಖರೀದಿಸಲೆಂದು ತೆರಳಿದ್ದ ಹೌರಾದ 34 ವರ್ಷದ ಲಾಲ್ ಸ್ವಾಮಿ ಎಂಬವರು ಪೊಲೀಸರು ಥಳಿಸಿದ ಪರಿಣಾಮ ಉಂಟಾದ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ.

ಆದರೆ ಪೊಲೀಸರು ಈ ಆರೋಪ ನಿರಾಕರಿಸಿದ್ದು, ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಆತನಿಗೆ ಹಿಂದೆಯೇ ಹೃದಯ ಖಾಯಿಲೆಯಿತ್ತು ಎಂದು ಹೇಳುತ್ತಿದ್ದಾರೆ.

ರಸ್ತೆಯಲ್ಲಿ ಸೇರಿದ್ದ ಜನರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸುತ್ತಿದ್ದ ವೇಳೆ  ಆತನಿಗೂ ಥಳಿಸಿದ್ದರು ಎಂದು ಆತನ ಪತ್ನಿ ಆರೋಪಿಸಿದ್ದಾರೆ. ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಲಾಲ್ ಸ್ವಾಮಿ ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)