ಕೊರೋನವೈರಸ್ ಇಡೀ ಮಾನವ ಜನಾಂಗಕ್ಕೆ ಗಂಡಾಂತರ: ವಿಶ್ವಸಂಸ್ಥೆ
ಜಿನೀವ (ಸ್ವಿಟ್ಸರ್ಲ್ಯಾಂಡ್): ನೂತನ-ಕೊರೋನವೈರಸ್ ಇಡೀ ಮಾನವ ಜನಾಂಗಕ್ಕೆ ಬೆದರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದೆ.
‘‘ಕೋವಿಡ್-19 ಇಡೀ ಮಾನವ ಜನಾಂಗವನ್ನು ಬೆದರಿಸುತ್ತಿದೆ. ಇಡೀ ಮಾನವತೆ ಇದರ ವಿರುದ್ಧ ಹೋರಾಡಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳುವುದು ಹಾಗೂ ದೇಶಗಳ ನಡುವೆ ಒಗ್ಗಟ್ಟು ಅಗತ್ಯ. ಬಿಡಿ ಬಿಡಿಯಾಗಿ ದೇಶಗಳು ನಡೆಸುವ ಪ್ರಯತ್ನಗಳು ಸಾಕಾಗುವುದಿಲ್ಲ’’ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದರು.
ಮಾರಕ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಜಗತ್ತಿನ ಅತಿ ಬಡ ಜನರಿಗೆ ಸಹಾಯ ಮಾಡುವುದಕ್ಕಾಗಿ 2 ಬಿಲಿಯ ಡಾಲರ್ (ಸುಮಾರು 15,000 ಕೋಟಿ ರೂಪಾಯಿ) ನೆರವು ನೀಡುವಂತೆ ದೇಶಗಳಿಗೆ ಮನವಿ ಮಾಡುವ ಯೋಜನೆಯೊಂದನ್ನು ಅವರು ಈ ಸಂದರ್ಭದಲ್ಲಿ ಘೋಷಿಸಿರು.
Next Story