varthabharthi


ಬೆಂಗಳೂರು

ಕೊರೋನ ಭೀತಿ: ಎ.14ರವರೆಗೂ ಮೆಟ್ರೋ ಬಂದ್

ವಾರ್ತಾ ಭಾರತಿ : 26 Mar, 2020

ಬೆಂಗಳೂರು, ಮಾ.26: ಕೊರೋನ ವೈರಸ್ ನಿಯಂತ್ರಣ ಹಿನ್ನೆಲೆ ತಡೆಯಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಲಾಕ್‍ ಡೌನ್ ಘೋಷಿಸಿದ್ದು, ಈ ಸಂಬಂಧ ನಮ್ಮ ಮೆಟ್ರೋ ಸಂಚಾರ ಸೇವೆ ಎ.14ರವರೆಗೂ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮೆಟ್ರೊ ರೈಲನ್ನು ಸುಸ್ಥಿತಿಯಲ್ಲಿ ಇಡಲು ಎರಡೂ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಪರೀಕ್ಷಾರ್ಥ ರೈಲು ಸಂಚಾರ ನಡೆಸಲಾಗುತ್ತದೆ. ರೈಲಿನಲ್ಲಿ ಕನಿಷ್ಠ ಸಂಖ್ಯೆಯ ನಿಗಮದ ಸಿಬ್ಬಂದಿ ಇರಲಿದ್ದಾರೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‍ಸಿಎಲ್) ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)