6 ಲಕ್ಷ ದಾಟಿದ ಕೊರೋನವೈರಸ್ ಸೋಂಕು ಪ್ರಕರಣ
ಪ್ಯಾರಿಸ್, ಮಾ. 28: ಜಗತ್ತಿನಾದ್ಯಂತ 6 ಲಕ್ಷಕ್ಕೂ ಅಧಿಕ ಕೊರೋನವೈರಸ್ ಸೋಂಕು ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ ಎಂದು ಎಎಫ್ಪಿ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.
183 ದೇಶಗಳಲ್ಲಿ ಒಟ್ಟು 6,05,010 ಸೋಂಕು ಪ್ರಕರಣಗಳು ದಾಖಲಾಗಿದ್ದು, 27,982 ಸಾವುಗಳು ಸಂಭವಿಸಿವೆ ಎಂದು ಅದು ತಿಳಿಸಿದೆ.
ಚೀನಾದಲ್ಲಿ 81,394 ಸೋಂಕು ಪ್ರಕರಣಗಳು ವರದಿಯಾಗಿದ್ದು, 3,295 ಸಾವುಗಳು ಸಂಭವಿಸಿವೆ.
Next Story