varthabharthi

ಕ್ರೀಡೆ

ರಾಷ್ಟ್ರೀಯ ಆರೋಗ್ಯ ಸೇವೆಗೆ ಇಂಗ್ಲೆಂಡ್ ಕ್ರಿಕೆಟ್ ನಾಯಕಿ ನೈಟ್ ಸೇರ್ಪಡೆ

ವಾರ್ತಾ ಭಾರತಿ : 29 Mar, 2020

ಲಂಡನ್,ಮಾ.29: ಯುನೈಟೆಡ್ ಕಿಂಗ್ಡಮ್ ನಲ್ಲಿ ಕೋವಿಡ್-19 ವಿರುದ್ದ ಹೋರಾಡಲು ಆರೋಗ್ಯ ರಕ್ಷಣಾ ಸೇವೆಗೆ ನೆರವಾಗಲು ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ(ಎನ್ಎಚ್ಎಸ್) ಸ್ವಯಂ ಸೇವಕಿಯಾಗಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹೀದರ್ ನೈಟ್ ಸೇರ್ಪಡೆಯಾಗಿದ್ದಾರೆ. ಇಂಗ್ಲೆಂಡ್ ಪರ 7 ಟೆಸ್ಟ್,101 ಏಕದಿನ ಹಾಗೂ 74 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿರುವ ನೈಟ್ ಅವರು ಮೆಡಿಸಿನ್ ಗಳ ಸಾಗಾಟ ಹಾಗೂ ಇಂಗ್ಲೆಂಡ್ ನಾದ್ಯಂತ ಕೋವಿಡ್-19ರ ಕುರಿತು ಜಾಗೃತಿ ಮೂಡಿಸಲು ನೆರವಾಗಲಿದ್ದಾರೆ. "ನಾನು ಎನ್ಎಚ್ಎಸ್ ನೊಂದಿಗೆ ಸಹಿ ಹಾಕಿದ್ದೇನೆ. ನನ್ನ ಬಳಿ ಸಾಕಷ್ಟು ಸಮಯವಿದೆ.ನನಗೆ ಸಾಧ್ಯವಿದ್ದಷ್ಟು ಸಹಾಯ ಮಾಡುತ್ತೇನೆ''ಎಂದು ನೈಟ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)