varthabharthiಕರ್ನಾಟಕ

ಇತ್ತೀಚೆಗೆ ಸೋಂಕಿಗೆ ಬಲಿಯಾದ ವ್ಯಕ್ತಿಯ ಪುತ್ರನಲ್ಲಿ ಕೋವಿಡ್ 19 ಪಾಸಿಟಿವ್

ತುಮಕೂರಿನಲ್ಲಿ ಮತ್ತೊಂದು ಕೊರೋನ ಸೋಂಕು ದೃಢ

ವಾರ್ತಾ ಭಾರತಿ : 30 Mar, 2020

ತುಮಕೂರು, ಮಾ.30: ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕು ದೃಢಗೊಂಡಿರುವ ಎರಡನೇ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗೆ ಕೊರೋನ ಸೋಂಕು ದೃಢಗೊಂಡು ಬಳಿಕ ಮೃತಪಟ್ಟಿದ್ದ ಶಿರಾ ಮೂಲದ ವೃದ್ಧ ವ್ಯಕ್ತಿಯ 13 ವರ್ಷದ ಮಗನಲ್ಲಿ ಈ ವೈರಸ್ ಸೋಂಕು ಪತ್ತೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಾಲಕನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೃದ್ಧ ವ್ಯಕ್ತಿಯ ಸಂಪರ್ಕದಲ್ಲಿದ್ದವರ ಸ್ಯಾಂಪಲ್ ವರದಿ ನೆಗೆಟಿವ್ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಾಹಿತಿಯ ಪ್ರಕಾರ ಕೊರೋನಗೆ ಬಲಿಯಾದ ಶಿರಾ ಮೂಲದ ವೃದ್ಧ ವ್ಯಕ್ತಿ ಮಾ.17ರಂದು ಆ ವ್ಯಕ್ತಿಯು ತಿಪಟೂರಿಗೆ ಸಂಚಾರ ಮಾಡಿದ್ದರು. ಅಲ್ಲಿ ಕೆಲವು ವ್ಯಕ್ತಿಗಳ ಜೊತೆ ಸಂಪರ್ಕವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ತಿಪಟೂರಿನಲ್ಲಿ 11 ಜನರನ್ನು ಪ್ರಾಥಮಿಕವಾಗಿ ಐಸೋಲೇಶನ್ ಮಾಡಲಾಗಿದೆ. ಅವರ ಸ್ಯಾಂಪಲ್ ಕೂಡ ಟೆಸ್ಟ್ ಗಾಗಿ ಲ್ಯಾಬೋರೇಟರಿಗೆ ಕಳಿಸಲಾಗಿದೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ 30 ಸ್ಯಾಂಪಲ್ ಗಳನ್ನು ಕಳುಹಿಸಿಕೊಡಲಾಗಿದ್ದು, ಅದರ ರಿಪೋರ್ಟ್ ಬರುವುದು ಮಾತ್ರ ಬಾಕಿ ಇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)