varthabharthi



ಸಿನಿಮಾ

ಕೊರೋನ ರೋಗಿಗಳ ಸೇವೆಗಾಗಿ ನರ್ಸ್ ಆಗಿ ಕೆಲಸ ಮಾಡಲು ಆರಂಭಿಸಿದ ಬಾಲಿವುಡ್ ನಟಿ

ವಾರ್ತಾ ಭಾರತಿ : 30 Mar, 2020

Photo: www.ndtv.com

ಹೊಸದಿಲ್ಲಿ: ಕೊರೋನವೈರಸ್ ನಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗಲು ನಟಿ ಶಿಖಾ ಮಲ್ಹೋತ್ರಾ ಮುಂಬೈ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡಲು ಆರಂಭಿಸಿದ್ದಾರೆ.

"ಕೋವಿಡ್ 19 ರೋಗಿಗಳಿಗೆ ನೆರವಾಗಲು ನಾನು ಬಯಸಿದ್ದೇನೆ" ಎಂದು ನರ್ಸಿಂಗ್ ನಲ್ಲಿ ಪದವಿ ಪೂರೈಸಿರುವ ಶಿಖಾ ಹೇಳುತ್ತಾರೆ. ಶಿಖಾ ಶಾರೂಖ್ ಖಾನ್ ನಟನೆಯ 'ಫ್ಯಾನ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

"ನರ್ಸ್ ಆಗಿ, ಎಂಟರ್ ಟೈನರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಲು ನಾನಿದ್ದೇನೆ. ನಿಮ್ಮ ಆಶೀರ್ವಾದ ಬೇಕಾಗಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಮತ್ತು ಸರಕಾರಕ್ಕೆ ಬೆಂಬಲ ನೀಡಿ" ಎಂದು ಶಿಖಾ ಮಲ್ಹೋತ್ರಾ ಪೋಸ್ಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)