varthabharthiರಾಷ್ಟ್ರೀಯ

ಆಂಧ್ರ ಪ್ರದೇಶ: ಎಲ್ಲ ಖಾಸಗಿ ಆಸ್ಪತ್ರೆಗಳು ಸರಕಾರದ ಸುಪರ್ದಿಗೆ

ವಾರ್ತಾ ಭಾರತಿ : 31 Mar, 2020

ಸಾಂದರ್ಭಿಕ ಚಿತ್ರ

ವಿಶಾಖಪಟ್ಟಣ,ಮಾ31: ಐತಿಹಾಸಿಕ ಕ್ರಮವೊಂದರಲ್ಲಿ ರಾಜ್ಯದ ಎಲ್ಲಾ ಖಾಸಗಿ ಹಾಗು ಕಾರ್ಪೋರೇಟ್ ಆಸ್ಪತ್ರೆಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಆಂಧ್ರ ಪ್ರದೇಶ ಸರಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಸೋಮವಾರ ಸಂಜೆವರೆಗೆ ಆಂಧ್ರ ಪ್ರದೇಶದಲ್ಲಿ 23 ಹೊಸ ಕೊರೋನ ಸೋಂಕು ಪ್ರಕರಣಗಳು ದೃಢವಾಗಿದ್ದು, ವಿಶಾಖಪಟ್ಟಣವೊಂದರಲ್ಲೇ 6 ಪ್ರಕರಣಗಳು ಪತ್ತೆಯಾಗಿದೆ. ಇದರ ಬೆನ್ನಿಗೆ 1897ರ ಸಾಂಕ್ರಾಮಿಕ ಕಾಯಿಲೆ ಕಾಯಿದೆ ಹಾಗೂ 2020 ಆಂಧ್ರ ಪ್ರದೇಶ ಸಾಂಕ್ರಾಮಿಕ ಕಾಯಿಲೆ ಕಾಯಿದೆಯನ್ನು ಬಳಸಿಕೊಂಡ ಜಗನ್ ಮೊಹನ್ ರೆಡ್ಡಿ ನೇತೃತ್ವದ ಅಂಧ್ರ ಪ್ರದೇಶ ಸರಕಾರ ರಾಜ್ಯದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಸುಪದ್ರಿಗೆ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನಿಡಿದೆ.

ಸರಕಾರದ ಈ ಕ್ರಮಕ್ಕೆ ಪ್ರತಿರೋಧ ತೋರಿಸಿದರೆ ಗಂಭೀರವಾಗಿ ಪರಿಗಣಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಆಂದ್ರ ಪ್ರದೇಶ ಸರಕಾರ ಹೆಳಿದೆ.

ಹೊಸ ಆದೇಶದ ಪ್ರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಸರ್ವ ಸಂಪನ್ಮೂಲಗಳನ್ನು ಹಾಗು ಸಲಕರಣೆಗಳನ್ನು ಸರಕಾರದ ಸೇವೆಗೆ ನೀಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)