ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 105ಕ್ಕೆ ಏರಿಕೆ
ಬೆಂಗಳೂರು, ಎ.1: ಕರ್ನಾಟಕದಲ್ಲಿ ಇಂದು ಬೆಳಗ್ಗಿನ ವರದಿ ಪ್ರಕಾರ ಮತ್ತೆ ನಾಲ್ವರಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.
ಇದುವರೆಗೆ ರಾಜ್ಯದಲ್ಲಿ ಸೋಂಕಿತ ಮೂವರು ಸಾವನ್ನಪ್ಪಿದ್ದರೆ, 9 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಸರಕಾರ ಇಂದು ಬೆಳಗ್ಗೆ ಬಿಡುಗಡೆಗೊಳಿಸಿದ ಮೀಡಿಯಾ ಬುಲೆಟಿನ್ನಲ್ಲಿ ತಿಳಿಸಿದೆ.
ಇಂದು ಸೋಂಕು ಪತ್ತೆಯಾಗಿರುವ ನಾಲ್ವರು ಕೂಡಾ ಪುರುಷರಾಗಿದ್ದಾರೆ. ಈ ಪೈಕಿ ಇಬ್ಬರು ಬೆಂಗಳೂರಿನ ನಿವಾಸಿಗಳಾಗಿದ್ದರೆ, ಇನ್ನಿಬ್ಬರು ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿಗಳು. ಅವರನ್ನು ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಿಸಿ ನಿಗಾದಲ್ಲಿರಿಸಲಾಗಿದೆ.
Next Story