varthabharthiಕ್ರೀಡೆ

ನನಗೆ ಗಂಗೂಲಿ ನೀಡಿದಷ್ಟು ಪ್ರೋತ್ಸಾಹ ಧೋನಿ, ಕೊಹ್ಲಿ ನೀಡಿಲ್ಲ: ಯುವರಾಜ್

ವಾರ್ತಾ ಭಾರತಿ : 1 Apr, 2020

ಹೊಸದಿಲ್ಲಿ: ಎಂ ಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರಿಂದ ತಮಗೆ ದೊರೆತ ಪ್ರೋತ್ಸಾಹಕ್ಕಿಂತ ಬಹಳಷ್ಟು ಹೆಚ್ಚಿನ ಪ್ರೋತ್ಸಾಹ ತಮಗೆ ಸೌರವ್ ಗಂಗೂಲಿ ಅವರಿಂದ ದೊರಕಿದೆ ಎಂದು ಮಾಜಿ ಆಲ್‍ರೌಂಡರ್  ಯುವರಾಜ್ ಸಿಂಗ್ ಹೇಳಿದ್ದಾರೆ.

"ನಾನು ಸೌರವ್ ಅವರ ನಾಯಕತ್ವದಡಿಯಲ್ಲಿ ಆಟವಾಡಿದ್ದೇನೆ. ಅವರಿಂದ ಸಾಕಷ್ಟು ಪ್ರೋತ್ಸಾಹ ನನಗೆ ದೊರಕಿದೆ. ನಂತರ ಮಾಹಿ ಅವರು ನಾಯಕತ್ವ ವಹಿಸಿಕೊಂಡಿದ್ದರು. ಸೌರವ್ ಹಾಗೂ ಮಾಹಿ ನಡುವೆ ಆಯ್ಕೆ ಮಾಡುವುದು ಕಷ್ಟಕರ. ಆದರೆ ಸೌರವ್ ನಾಯಕತ್ವದಡಿಯಲ್ಲಿ ಆಟವಾಡಿದ ಹೆಚ್ಚಿನ ಸ್ಮರಣೀಯ ಘಟನೆಗಳು ನನಗೆ ನೆನಪಿವೆ, ಅದು ಅವರು ನನಗೆ ನೀಡಿದ್ದ ಪ್ರೋತ್ಸಾಹದಿಂದಾಗಿ. ಆದರೆ ಆ ರೀತಿಯ ಪ್ರೋತ್ಸಾಹ ನನಗೆ ಮಾಹಿ ಹಾಗೂ ವಿರಾಟ್ ಅವರಿಂದ ದೊರಕಿರಲಿಲ್ಲ'' ಎಂದು ಸ್ಪೋರ್ಟ್ಸ್ ಸ್ಟಾರ್ ಗೆ ನೀಡಿದ್ದ ಸಂದರ್ಶನದಲ್ಲಿ ಯುವರಾಜ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ತಂಡಕ್ಕೆ ಪ್ಯಾಡಿ ಉಪ್ಟನ್ ಅವರಂತೆ ಆಟಗಾರರ ಜತೆ  ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ಮಾತನಾಡುವವರು ಬೇಕು ಎಂದು ಕಳೆದ ವರ್ಷ ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ್ದ ಯುವರಾಜ್ ಹೇಳಿಕೊಂಡರು. ಉಪ್ಟನ್ ಅವರು  ಭಾರತೀಯ ಕ್ರಿಕೆಟ್ ತಂಡದ ಮಾನಸಿಕ ಆರೋಗ್ಯ ಸಂಬಂಧಿ ಕೋಚ್ ಆಗಿ ಈ ಹಿಂದೆ ಗ್ಯಾರಿ ಕಸ್ಟ್ರನ್ ಅವರು ಕ್ರಿಕೆಟ್ ಕೋಚ್ ಆಗಿದ್ದ  ವೇಳೆ ಕಾರ್ಯನಿರ್ವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)