varthabharthiನಿಧನ

ಎಸಿಎ ಕಾಂತಪುರಂ

ವಾರ್ತಾ ಭಾರತಿ : 1 Apr, 2020

ಕಾಂತಪುರಂ, ಎ.1: ಹಿರಿಯ ವಿದ್ವಾಂಸ ಅವೇಲತ್ತ್ ಎಸಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ (ಎಸಿಎ ಕಾಂತಪುರಂ) ಬುಧವಾರ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಲ್ಲಿಕೋಟೆ ಜಿಲ್ಲಾಧ್ಯಕ್ಷರಾಗಿ, ಸುನ್ನಿ ವಿದ್ಯಾಭ್ಯಾಸ ಮಂಡಳಿ ಹಾಗೂ ಉಳ್ಳಾಲ ಸೈಯದ್ ಮದನಿ ಟ್ರಸ್ಟಿನ ತಪಾಸಣಾಧಿಕಾರಿಯಾಗಿ, ಎಸ್‌ವೈಎಸ್ ಕೇರಳದ ರಾಜ್ಯದ ಸಂಘಟಕ ಇತ್ಯಾದಿ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಮುಸ್ಲಿಂ ಲೀಗ್ ನಾಯಕರಾಗಿಯೂ ಗುರುತಿಸಿದ್ದರು.
ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

*ಸಂತಾಪ: ಎಸ್‌ಜೆಎಂ ಕರ್ನಾಟಕ ರಾಜ್ಯಾಧ್ಯಕ್ಷ ಮುಫತ್ತಿಸ್ ಆತೂರ್ ಸಅದ್ ಮುಸ್ಲಿಯಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)