varthabharthi

ರಾಷ್ಟ್ರೀಯ

ಕೊರೋನ ವಿರುದ್ಧದ ಹೋರಾಟಕ್ಕೆ ತನ್ನ ಉಳಿತಾಯದ ಹಣ ದೇಣಿಗೆ ನೀಡಿದ 7 ವರ್ಷದ ಸೈಯದ್ ಅನೀಸ್

ವಾರ್ತಾ ಭಾರತಿ : 1 Apr, 2020

ಚೆನ್ನೈ: ಕೋವಿಡ್-19 ವಿರುದ್ಧದ ಸಮರಕ್ಕೆ ವಿಶ್ವಾದ್ಯಂತ ಸೆಲೆಬ್ರಿಟಿಗಳು ದೇಣಿಗೆ ನೀಡುತ್ತಿದ್ದರೆ ಇಲ್ಲಿನ ಹಳೆ ವಾಷರ್‍ ಮನ್‍ ಪೇಟ್ ನಿವಾಸಿ ಏಳು ವರ್ಷದ ಬಾಲಕ ಸೈಯದ್ ಅನೀಸ್, ತಾನು ಇದುವರೆಗೆ ಉಳಿತಾಯ ಮಾಡಿದ್ದ 845 ರೂ.ಗಳನ್ನು ದೇಣಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದ ಬಾಲಕ, “ನಾನು ಇದುವರೆಗೆ 845 ರೂಪಾಯಿ ಕೂಡಿಟ್ಟಿದ್ದೇನೆ. ತಮಿಳುನಾಡಿನಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕಾಗಿ ನಿಮಗೆ ಅದನ್ನು ದೇಣಿಗೆಯಾಗಿ ನೀಡಲು ಬಯಸಿದ್ದೇನೆ”ಎಂದು ವಿವರಿಸಿದ್ದಾನೆ.

ಏಕೆ ಈ ದೇಣಿಗೆ ನೀಡಿದ್ದು ಎಂಬ ಪ್ರಶ್ನೆಗೆ ಉತ್ತರಿಸಿದ ಬಾಲಕ, ಲಾಕ್‍ ಡೌನ್‍ ನಿಂದಾಗಿ ಸಾವಿರಾರು ಮಂದಿ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿ ಮನೆಗಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಯಾವ ಆಹಾರವೂ ಇಲ್ಲದೇ ಅಲೆದಾಡುತ್ತಿರುವ ಅವರಿಗೆ ಕೈಲಾದ ನೆರವು ನೀಡಿದ್ದಾಗಿ ಹೇಳಿದ್ದಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)