varthabharthi

ಕರಾವಳಿ

ಕಾಸರಗೋಡು: ಬುಧವಾರ 12 ಮಂದಿಗೆ ಸೋಂಕು ದೃಢ

ವಾರ್ತಾ ಭಾರತಿ : 1 Apr, 2020

ಸಾಂದರ್ಭಿಕ ಚಿತ್ರ 

ಕಾಸರಗೋಡು: ಕೊರೋನ ಸೋಂಕು ಕಾಸರಗೋಡು ಜಿಲ್ಲೆಯಲ್ಲಿ ಆತಂಕಕ್ಕೆ ಎಡೆಮಾಡಿಕೊಡುತ್ತಿದ್ದು, ಬುಧವಾರ 12 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 120 ಕ್ಕೇರಿದೆ. ಮಂಗಳವಾರ ಓರ್ವನಲ್ಲಿ ಸೋಂಕು ಪತ್ತೆಯಾಗಿತ್ತು.

ಇಂದು ಕೇರಳದಲ್ಲಿ 24 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 12  ಕಾಸರಗೋಡು ಜಿಲ್ಲೆಗೆ ಸೇರಿದೆ.

ಕೇರಳದಲ್ಲಿ ಇದುವರೆಗೆ 265 ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 237 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 191 ಮಂದಿ ವಿದೇಶದಿಂದ ಬಂದವರು. 9 ಮಂದಿ ವಿದೇಶಿಯರು ಒಳಗೊಂಡಿದ್ದಾರೆ.

ಜಿಲ್ಲೆಯಲ್ಲಿ 8971 ಮಂದಿ ನಿಗಾದಲ್ಲಿದ್ದು, ಈ ಪೈಕಿ 177 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ಇದುವರೆಗೆ 1109 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದ್ದು, 737 ಮಂದಿಯ ವರದಿ ಬಂದಿದೆ. ಈ ಪೈಕಿ 629 ಮಂದಿಯ ವರದಿ ನೆಗೆಟಿವ್ ಆಗಿದೆ. 371 ಮಂದಿಯ ವರದಿ ಬರಬೇಕಿದೆ.   

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)