ಕೋವಿಡ್ -19: ಭಾರತದಲ್ಲಿ ಸಾವಿನ ಸಂಖ್ಯೆ 50
ಹೊಸದಿಲ್ಲಿ, ಎ.2: ಕೊರೋನ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ಏರುತ್ತಿದ್ದು, ಈ ವರೆಗೆ 1,965 ಪೊಸಿಟಿವ್ ಪ್ರಕರಣ ಪತ್ತೆಯಾಗಿದೆ.
ಭಾರತದಲ್ಲಿ ಕೋವಿಡ್ -19 ಸಂಬಂಧ ಮೃತಪಟ್ಟವರ ಸಂಖ್ಯೆ 50 ತಲುಪಿದೆ. ಜಾಗತಿಕವಾಗಿ ಸುಮಾರು 45,000 ಮಂದಿ ಬಲಿಯಾಗಿದ್ದಾರೆ
ಭಾರತದಲ್ಲಿ ಕಳೆದ 4 ದಿನಗಳಲ್ಲಿ ಕೊರೋನ ವೈರಸ್ ಪ್ರಕರಣಗಳು ಏರಿಕೆಯಾಗಿದ್ದು, ಆರೋಗ್ಯ ಸಚಿವಾಲಯವು ಈವರೆಗೆ 1,828 ಪೊಸಿಟಿವ್ ಪ್ರಕರಣಗಳನ್ನು ದೃಢಪಡಿಸಿದೆ. ಕೊರೋನ ವೈರಸ್ ಸೋಂಕಿತ 41 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರಕಾರ ತಿಳಿಸಿದೆ.
ಕೊರೋನ ವೈರಸ್ ನಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾದ ದೇಶಗಳು
ದೇಶ ಒಟ್ಟು ಪ್ರಕರಣಗಳು ಸಾವಿನ ಸಂಖ್ಯೆ
ಅಮೆರಿಕ 2,15,215 5,110
ಇಟಲಿ 1,10, 574 13,155
ಸ್ಪೇನ್ 1,04,118 9,387
ಚೀನಾ 81,554 3,312
ಜರ್ಮನಿ 77,981 931
ಇತರ ದೇಶಗಳಲ್ಲಿ 3,46,515 15,350