ಲಾಕ್ಡೌನ್ ಆದೇಶ ಉಲ್ಲಂಘನೆ: ಮಂಗಳೂರಿನಲ್ಲಿ 175 ವಾಹನ ಮುಟ್ಟುಗೋಲು
ಮಂಗಳೂರು, ಎ.3: ಲಾಕ್ಡೌನ್ ಆದೇಶ ಉಲ್ಲಂಘಿಸಿ ಅನಾವಶ್ಯಕವಾಗಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದ 175 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಶುಕ್ರವಾರ ಮುಟ್ಟುಗೋಲು ಹಾಕಿದ್ದಾರೆ.
ಇದರಲ್ಲಿ 122 ದ್ವಿಚಕ್ರ ವಾಹನ, 6 ಕಾರುಗಳು ಹಾಗೂ 5 ಆಟೋ ರಿಕ್ಷಾಗಳು ಸೇರಿವೆ.
ಟ್ರಾಫಿಕ್ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 (44 ದ್ವಿಚಕ್ರ, 3 ಕಾರು ಮತ್ತು 3 ರಿಕ್ಷಾ), ಟ್ರಾಫಿಕ್ ಪೂರ್ವ ಠಾಣಾ ವ್ಯಾಪ್ತಿಯಲ್ಲಿ 30 (27 ದ್ವಿಚಕ್ರ, 2 ಕಾರು, 1 ರಿಕ್ಷಾ), ಟ್ರಾಫಿಕ್ ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ 17 (15 ದ್ವಿಚಕ್ರ, 1 ಕಾರು, 1 ರಿಕ್ಷಾ), ಟ್ರಾಫಿಕ್ ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ 9 ದ್ವಿಚಕ್ರ ವಾಹನ, ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ 18 ದ್ವಿಚಕ್ರ ವಾಹನ, ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ 5 ದ್ವಿಚಕ್ರ ವಾಹನ ಹಾಗೂ ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ 4 ದ್ವಿಚಕ್ರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
Next Story