61,302 ರೇಶನ್ ಕಾರ್ಡ್ಗೆ ಪಡಿತರ ವಿತರಣೆ
ಮಂಗಳೂರು, ಎ.3: ದ.ಕ.ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆಯು ಪ್ರಾರಂಭವಾಗಿದ್ದು, ಕಳೆದ ಎರಡು ದಿನಗಳಲ್ಲಿ 61,302 ಕಾರ್ಡುದಾರರಿಗೆ 27,000 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗಿದೆ.
ಕೊರೋನ ಲಾಕ್ಡೌನ್ ಹಿನ್ನೆಲೆಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್ನ ಪ್ರತೀ ಕುಟುಂಬದ ಸದಸ್ಯರಿಗೆ ತಲಾ 10 ಕೆಜಿ, ಪ್ರತೀ ಅಂತ್ಯೋದಯ ಕಾರ್ಡ್ಗೆ 70 ಕೆಜಿ ಹಾಗೂ ಪ್ರತೀ ಎಪಿಎಲ್ ಕಾರ್ಡ್ಗೆ 20 ಕೆಜಿಯಂತೆ ಅಕ್ಕಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story