ಅಮೆರಿಕದಲ್ಲಿ ಕೊರೋನ ವೈರಸ್ ಅಟ್ಟಹಾಸ: 24 ಗಂಟೆಯಲ್ಲಿ 1,480 ಮಂದಿ ಸಾವು
ವಾಷಿಂಗ್ಟನ್,ಎ.4: ಅಮೆರಿಕದಲ್ಲಿ 24 ಗಂಟೆಯಲ್ಲಿ ಕೋವಿಡ್-19 ವೈರಸ್ನಿಂದ ಸುಮಾರು 1,500 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಟ್ರಾಕರ್ ತಿಳಿಸಿದೆ. ಕೊರೋನ ವೈರಸ್ ಪಿಡುಗು ಕಾಣಿಸಿಕೊಂಡ ಬಳಿಕ ಜಾಗತಿಕವಾಗಿ ಇದೇ ಮೊದಲ ಬಾರಿ 24 ಗಂಟೆಯಲ್ಲಿ ಇಷ್ಟೊಂದು ಜನ ಮೃತಪಟ್ಟಿದ್ದಾರೆ.
ಗುರುವಾರ ರಾತ್ರಿ 8:30ರಿಂದ ಶುಕ್ರವಾರ ರಾತ್ರಿ 8:30ರ ಮಧ್ಯೆ 1,480 ಜನರು ಮೃತಪಟ್ಟಿದ್ದಾರೆ ಎಂದು ಯುನಿವರ್ಸಿಟಿ ನಿರಂತರವಾಗಿ ನವೀಕರಿಸಿದ ಅಂಕಿ-ಅಂಶದಿಂದ ತಿಳಿದುಬಂದಿದೆ.
ಅಮೆರಿಕದಲ್ಲಿ ಕೊರೋನ ವೈರಸ್ ಅಟ್ಟಹಾಸದಿಂದ ಈ ತನಕ ಒಟ್ಟು 7,406 ಮಂದಿ ಮೃತಪಟ್ಟಿದ್ದಾರೆ.
Next Story