'ನೋಟ್ ಬ್ಯಾನ್ ಆಯ್ತಲ್ಲ, ಎಲ್ಲಾ ಆರಾಮು': ದೇಶದ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟ ಹಾಡು
ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು, ದೇಶದ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವ ವಿಡಂಬನಾತ್ಮಕ ಹಾಡು 'ಎಲ್ಲಾ ಆರಾಮು' ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವಿದೇಶದಲ್ಲಿರುವವರು ಫೋನ್ ಮೂಲಕ ದೇಶ ಹೇಗಿದೆ ಎಂದು ಕೇಳುವುದು ಮತ್ತು ದೇಶದಲ್ಲಿರುವ ವ್ಯಕ್ತಿಯೊಬ್ಬರು ಅದಕ್ಕೆ ಉತ್ತರಿಸುವಂತಿರುವ ಈ ಹಾಡನ್ನು ರಾಗ್ ಸಾಗರ್ ಹಾಡಿದ್ದಾರೆ. ಧನಂಜಯ್ ಎನ್ . ಅಭಿನಯಿಸಿದ್ದರೆ, ರೇ ವೆಂಟ್ಯುರಾ ಸಂಗೀತವನ್ನು ಜೇಮಿ ಡಿಸಿಲ್ವ ಮರು ರಚಿಸಿದ್ದಾರೆ. ಪ್ಯಾಪಿಲಾನ್ ಎಂಬ ಯುಟ್ಯೂಬ್ ಚಾನಲ್ ನಲ್ಲಿ ಈ ಹಾಡನ್ನು ಅಪ್ ಲೋಡ್ ಮಾಡಲಾಗಿದ್ದು, ವಿಡಿಯೋ ಈ ಕೆಳಗಿದೆ.
Next Story