ಟ್ರಂಪ್ ಎಚ್ಚರಿಕೆಗೆ ಮಣಿದ 56 ಇಂಚು: ಮಲೇರಿಯಾ ಔಷಧಿ ರಫ್ತಿಗೆ ಅವಕಾಶ ನೀಡಿದ್ದಕ್ಕೆ ಬಿ.ಕೆ. ಹರಿಪ್ರಸಾದ್ ಆಕ್ರೋಶ
ಬೆಂಗಳೂರು: ಪ್ರತೀಕಾರದ ಕ್ರಮ ಎದುರಿಸಬೇಕಾದೀತು ಎಂದು ಟ್ರಂಪ್ ಎಚ್ಚರಿಕೆ ನೀಡಿದ ನಂತರ ಮಲೇರಿಯಾ ಔಷಧದ ರಫ್ತಿನ ಮೇಲಿನ ನಿಷೇಧವನ್ನು ಕೇಂದ್ರ ಸರಕಾರ ತೆರವುಗೊಳಿಸಿರುವುದನ್ನು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಎಪ್ರಿಲ್ 4: ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧಿಸಿದ ಸರಕಾರ, ಎಪ್ರಿಲ್ 6: ರಫ್ತಿನ ಮೇಲಿನ ನಿಷೇಧ ತೆರವುಗೊಳಿಸಲು ಹೇಳಿದ ಟ್ರಂಪ್. ನಂತರ ಪ್ರತೀಕಾರದ ಎಚ್ಚರಿಕೆ. ಎಪ್ರಿಲ್ 7: ರಫ್ತಿಗೆ ಅವಕಾಶ ನೀಡಿದ ಮೋದಿ, ಒಂದೇ ದಿನದಲ್ಲಿ ಮಣಿದ 56 ಇಂಚು. ಭಾರತಕ್ಕೆ ಔಷಧಿ ದೊಡ್ಡ ಪ್ರಮಾಣದಲ್ಲಿ ಬೇಕಾದರೆ ಏನು ಮಾಡುವುದು" ಎಂದು ಪ್ರಶ್ನಿಸಿದ್ದಾರೆ.
Apr 4: Govt bans Hydroxychloroquine exports
— Hariprasad.B.K. (@HariprasadBK2) April 7, 2020
Apr 6: Trump asks Modi to lift export ban. Threatens to retaliate if ban is not lifted
Apr 7: Modi allows exports
56-inch succumbed in just a day. What if India needs it in a large quantities, sooner than later?