ಲಾಕ್ ಡೌನ್ ಉಲ್ಲಂಘನೆ: ಮುಂದುವರೆದ ಲಾಠಿ ಪ್ರಹಾರ
ಬೆಂಗಳೂರು, ಎ.8: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಾಕ್ ಡೌನ್ ಉಲ್ಲಂಘಿಸಿ ಅನವಶ್ಯಕವಾಗಿ ಹೊರಗಡೆ ಓಡಾಟ ನಡೆಸಿದ ಸಾರ್ವಜನಿಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಧಾರವಾಡ, ಕಲಬುರ್ಗಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಬುಧವಾರ ಓಡಾಟ ನಡೆಸಿದ ಸಾರ್ವಜನಿಕರನ್ನು ವಿಚಾರಣೆ ನಡೆಸಿದ ಪೊಲೀಸರು, ತಪ್ಪಿತಸ್ಥರಿಗೆ ಲಾಠಿ ಏಟು ನೀಡಿದರು. ಇನ್ನು, ಕೆಲವರ ಬಳಿಯಿಂದ ವಾಹನ ಜಪ್ತಿ ಮಾಡಲಾಯಿತು.
Next Story